ಬೆಂಗಳೂರು: ಜೀವಮಾನವಿಡೀ ಕಳ್ಳತನವನ್ನೇ ಫುಲ್ ಟೈಂ ವೃತ್ತಿಯನ್ನಾಗಿಸಿಕೊಂಡಿದ್ದ ನಟೋರಿಯಸ್ ಮನೆಗಳ್ಳ ಈಗ ಮತ್ತೊಮ್ಮೆ ಪೊಲೀಸ್ರ ಅತಿಥಿಯಾಗಿದ್ದಾನೆ.
ಪ್ರಕಾಶ್ ಎಂಬ ಈ 54 ವರ್ಷದ ವ್ಯಕ್ತಿ ಇಲ್ಲಿಯವರೆಗೆ ಕಳ್ಳತನ ಮಾಡಿದ್ದು 160ಕ್ಕೂ ಹೆಚ್ಚು ಬಾರಿ! 1978ರಲ್ಲಿ ಹತ್ತನೇ ತರಗತಿ ಇದ್ದಾಗಲೇ ಕಳ್ಳತನಕ್ಕೆ ಇಳಿದಿದ್ದ ಈ ಚಾಲಾಕಿ. ಅಂದರೆ ಬರೋಬ್ಬರಿ 40 ವರ್ಷಗಳಿಂದ ಕಳ್ಳತನವನ್ನೇ ತನ್ನ ಫುಲ್ ಟೈಂ ವೃತ್ತಿಯನ್ನಾಗಿಸಿಕೊಂಡಿದ್ದ!
ರಾಜಾಜಿನಗರ ನಿವಾಸಿ ಪ್ರಕಾಶ್, ಶಿವಮೊಗ್ಗ, ಬಳ್ಳಾರಿ, ಕೋಲಾರ ಮೂಲದ ಯುವತಿಯರನ್ನು ಮದ್ವೆಯಾಗಿದ್ದಾನೆ. ಮೂವರು ಪತ್ನಿಯರು, 7 ಮಕ್ಕಳಿದ್ದಾರೆ! ಈತನ ಕುಟುಂಬವೇ ಕಳ್ಳರ ಕುಟುಂಬವಾಗಿದ್ದು ಸಹೋದರ ವರದರಾಜ್ , ಮಕ್ಕಳಾದ ಬಾಲರಾಜ್, ಮಿಥುನ್ ಹಾಗೂ ಅಳಿಯ ಜಾನ್ ಎಂಬುವವರೂ ಚೋರತನಕ್ಕೆ ಸಾಥ್ ನೀಡುತ್ತಿದ್ದರು.
1978ರಿಂದ 1986ರ ವರೆಗೆ 100 ಬಾರಿ ಕಳ್ಳತನ ಮಾಡಿದ್ದ. ಶೇಷಾದ್ರಿಪುರಂನಲ್ಲಿ ಚಿನ್ನದ ಅಂಗಡಿ, ಮಾರ್ಕೆಟ್ ಶೇಟ್ ಅಂಗಡಿ ಬೀಗ ಮುರಿದು 4 ಕೆ.ಜಿ. ಚಿನ್ನ ಕದ್ದಿದ್ದ. ಹಾಗೇ 1997ರಲ್ಲಿ ಗೋವಾದಲ್ಲಿ 7 ಕೆ.ಜಿ. ಚಿನ್ನಾಭರಣ ಕದ್ದಿದ್ದ! ಇನ್ನು, ಇಲ್ಲಿಯವರೆಗೆ ಒಟ್ಟು 20 ಬಾರಿ ಜೈಲಿಗೆ ಹೋಗಿ ಬಂದಿದ್ದು, ಈಗ ಮತ್ತದೇ ಕಳ್ಳತನದ ಕುಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ರಾಜಾಜಿನಗರ ಪೊಲೀಸರು "ಮಹಾ ಖದೀಮ"ನನ್ನು ಬಂಧಿಸಿದ್ದಾರೆ.
PublicNext
27/08/2022 02:35 pm