ನೆಲಮಂಗಲ: ಅವ್ರಿಬ್ರು ಹೊರ ರಾಜ್ಯದಿಂದ ಬದುಕು ಕಟ್ಕೊಳ್ಳೋಕೆ ಆಂತ ಬೆಂಗಳೂರಿಗೆ ಬಂದಿದ್ರು. ಕಳೆದ 8 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡ್ಕೊಂಡಿದ್ದವರು. ಹಣದ ವಿಚಾರಕ್ಕೆ ಕುಡಿದ ಮತ್ತಿನಲ್ಲಿ ತನ್ನ ಜಿಗರಿದೋಸ್ತನನ್ನೆ ಕೊಲೆ ಮಾಡಿ ತಲೆಮರೆಸಿಕೊಂಡ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಫೋಟೋದಲ್ಲಿ ಕಾಣ್ತಿರೋ ಈ ವ್ಯಕ್ತಿ ಹೆಸ್ರು ಮಿಲನ್ ಮಲ್ಲಿಕ್ (33) ಅಂತ, ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರ ಮೂಲದವನು. ಇದೇ ತಿಂಗಳ 7 ನೇ ತಾರೀಖು ನೆಲಮಂಗಲ ತಾಲ್ಲೂಕಿನ ಬೈರನಹಳ್ಳಿಯಲ್ಲಿ ತನ್ನೊಟ್ಟಿಗೆ ಕೆಲಸ ಮಾಡ್ಕೊಂಡಿದ್ದ ಸ್ನೇಹಿತ ಜ್ಞಾನೇಶ್ವರ್ ಕುಮಾರ್ @ ರಾಜು ಎಂಬಾತನನ್ನ ಕೊಲೆ ಮಾಡಿ ತಲೆಮರೆಸಿಕೊಂಡಿದ್ದವನು ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರ ಅತಿಥಿಯಾಗಿದ್ದಾನೆ. ತಾಲ್ಲೂಕಿನ ಬೈರನಹಳ್ಳಿಯ ಅನುಪಮ ನಗರದಲ್ಲಿ ಸುಧಾಕರ್ ಎಂಬುವರ ಮನೆ ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಆರೋಪಿ ಮಿಲನ್ ಹಾಗೂ ಮೃತ ರಾಜುವಿಗೆ ಆಗಸ್ಟ್ 6 ರ ಸಂಜೆ ವಾರದ ಬಟ್ವಾಡೆ ಪಡೆದು ಕಂಠ ಪೂರ್ತಿ ಕುಡಿದು ತೇಲಾಡುತ್ತಿದ್ರು. ಇದೇ ವೇಳೆ ಕೆಲಸ ಬಿಟ್ಟು ಊರಿಗೆ ತೆರಳುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕುಡಿದ ಅಮಲಿನಲ್ಲಿದ್ದ ಮಿಲನ್ ಉದ್ರಿಕ್ತನಾಗಿ ರಾಜುವಿನ ತಲೆಯನ್ನ ಸಿಮೆಂಟ್ ಇಟ್ಟಿಗೆಗೆ ಗುದ್ದಿ ಪರಾರಿಯಾಗಿದ್ದ.
ಈ ಸಂಬಂಧ ಘಟನಾ ಸ್ಥಳಕ್ಮೆ ಆಗಮಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ರು. ಅಷ್ಟರಲ್ಲಾಗಲೇ ಮಿಲನ್ ಲಾರಿ ಹಿಡಿದು ಕೊಲ್ಲಾಪುರ ಸೇರಿದ್ದ, ನಂತ್ರ ಹೈದರಾಬಾದ್, ಪೂನಾ ಸುತ್ತಾಡಿ ಪೂನಾದ ಅಪಾರ್ಟ್‌ಮೆಂಟ್ ಒಂದ್ರಲ್ಲಿ ಕೂಲಿ ಕೆಲಸ ಮಾಡುವಾಗ, ಸುಮಾರು 5 ಸಾವಿರ ಕಿ.ಮೀ ವರೆಗೆ ಸರ್ಚ್ ಮಾಡಿದ್ದ ನೆಲಮಂಗಲ ಗ್ರಾಮಾಂತರ ಪೊಲೀಸ್ರಿಗೆ ಮಿಲನ್ ಸಿಕ್ಕಿಬಿದ್ದಿದ್ದಾನೆ.
ಘಟನೆ ಸಂಬಂಧ ಆರೋಪಿಯನ್ನ ಬಂಧಿಸಿರೋ ನೆಲಮಂಗಲ ಗ್ರಾಮಾಂತರ ಪೊಲೀಸ್ರು ಆರೋಪಿಯೊಂದಿಗೆ ಸ್ಥಳ ಮಹಜರ್ ನೆಡೆಸಿ ಸದ್ಯ ಜೈಲಿಗಟ್ಟಿದ್ದಾರೆ. ಅದೇನೇ ಇರಲಿ, ಸ್ನೇಹಿತರ ನಡುವೆ ಊರಿಗೆ ಹೋಗಲು ಶುರುವಾದ ಜಗಳ, ಒಬ್ಬ ಮಸಣಕ್ಕೆ ಸೇರಿದ್ರೆ, ಮತ್ತೊಬ್ಬ ಕಂಬಿ ಹಿಂದೆ ನಿಂತಿದ್ದಾನೆ..
ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ ಬೆಂಗಳೂರು
PublicNext
26/08/2022 10:36 am