ಚಾಮರಾಜಪೇಟೆ: ಪೊಲೀಸರ ಜೊತೆ ಚಾಮರಾಜಪೇಟೆ ನಾಗರಿಕ ಒಕ್ಕೂಟದವರು ವಾಗ್ವಾದ ನಡೆಸಿದ್ದಾರೆ. ಸರ್ವರಿಗೂ 75 ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿ ಗ್ರೌಂಡ್ ಹೊರಗಿನ ಲೈಟ್ ಕಂಬಕ್ಕೆ ಫ್ಲೆಕ್‌ನ್ನ ಕಟ್ಟುತ್ತಿದ್ದರು. ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ಫ್ಲೆಕ್ಸ್‌ಗಳನ್ನ ತೆರವುಗೊಳಿಸುವಂತೆ ನಾಗರಿಕರಿಗೆ ತಾಕೀತು ಮಾಡಿದ್ದಾರೆ. ನೀವು ಹಾಕಿದ್ರೆ ಮತ್ತೊಬ್ಬರು ಹಾಕ್ತೀವಿ ಅಂತಾ ಬರ್ತಾರೆ ಇದು ಸರ್ಕಾರಿ ಕಾರ್ಯಕ್ರಮ ಫ್ಲೆಕ್ಸ್‌ತೆರವುಗೊಳಿಸಿ ಅಂತಾ ಪೊಲೀಸ ಸೂಚನೆ ನೀಡಿದ್ದಾರೆ. ಹೀಗಾಗಿ ನಾಗರಿಕ ಒಕ್ಕೂಟದವರು ಪೊಲೀಸರ ವಿರುದ್ಧ ಆಕ್ರೋಶಗೊಂಡಿದ್ದಾರೆ.
ನಾವು ಇನ್ನೆಲ್ಲಿ ಬೋರ್ಡ್ ಕಟ್ಟಬೇಕು ಗೌರ್ನಮೆಂಟ್ ಮೈದಾನ ಬಗ್ಗೆ ತಿಳಿಸಿದ್ದೇ ನಾವು ೧೦೮ ಸಂಘಟನೆಗಳು ಸೇರಿ ಒಕ್ಕೂಟ ಮಾಡಲಾಗಿದೆ . ಸರ್ಕಾರದ ಗಮನ ಸೆಳೆದಿದ್ದೇ ನಮ್ಮ ಒಕ್ಕೂಟ .ನಮಗೆ ಫ್ಲೆಕ್ಸ್‌ಹಾಕಲು ಬಿಡಲ್ಲ ಅಂದ್ರೆ ಹೇಗೆ ಅಂತಾ ಚಾಮರಾಜಪೇಟೆ ನಾಗರಿಕ ಒಕ್ಕೂಟದವರು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರ ವಿರುದ್ಧ ವ್ಯಾಪಕ ಅಸಮಾಧಾನಗೊಂಡಿದ್ದಾರೆ.
PublicNext
14/08/2022 09:38 pm