ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ: ಅಕ್ರಮವಾಗಿ ಮನೆ ಹಿತ್ತಲಲ್ಲಿ ಬೆಳೆದಿದ್ದ ಗಾಂಜಾ ವಶ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ‌ಜಿಲ್ಲೆ ದೇವನಹಳ್ಳಿ ತಾಲೂಕಿನ ಅರುವನಹಳ್ಳಿ ಗ್ರಾಮದ ಮನೆ ಹಿತ್ತಲಲ್ಲಿ ಬೆಳೆದಿದ್ದ 80 ಸಾವಿರ ಮೌಲ್ಯದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ವಿಶ್ವನಾಥಪುರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಬೆಳೆದಿದ್ದ 2 ಕೆಜಿ 270 ಗ್ರಾಂ ತೂಕದ ಹಸಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದಿದ್ದಾರೆ. ಗಾಂಜಾ ಬೆಳೆಯುತ್ತಿದ್ದ ಆರೋಪಿ ಆನಂದ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ವಿಶ್ವನಾಥಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸತೀಶ್, ಸಂಜಯ್, ನಾಗರಾಜು, ಪ್ರಕಾಶ್ ರವರ ತಂಡ‌ ದಾಳಿ ನಡೆಸಿ ಆರೋಪಿಯನ್ನು & ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.

ಸುರೇಶ್ ಬಾಬು,ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ

Edited By :
PublicNext

PublicNext

14/06/2022 02:08 pm

Cinque Terre

29.48 K

Cinque Terre

0

ಸಂಬಂಧಿತ ಸುದ್ದಿ