ಬೆಂಗಳೂರು: ಒಂದು ಕಡೆ ಪಿಎಸ್‌ಐ ಪರೀಕ್ಷೆ ಬರೆದು ಅರ್ಹರಾಗಿರುವ 545 ಅಭ್ಯರ್ಥಿಗಳ ಸ್ಥಿತಿ ಇನ್ನೂ ಅತಂತ್ರವಾಗಿದೆ. ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿರುವುದು ಪತ್ತೆಯಾಗಿ ಸಿಐಡಿ ತನಿಖೆ ಕೂಡ ಆರಂಭವಾಗಿದೆ. ಈ ಮಧ್ಯೆ ಆದೇಶ ಪ್ರತಿ ಕೈ ಸೇರುವ ಮೊದಲೇ ಇಲ್ಲೊಬ್ಬ ಅಭ್ಯರ್ಥಿ ಖಾಕಿ ಸಮವಸ್ತ್ರ ಧರಿಸಿ ಶೋ ಕೊಟ್ಟಿದ್ದಾರೆ.
ಗುಡಸಲಕೊಪ್ಪ ಗ್ರಾಮದ ಬಸವನಗೌಡ ತಿ ಕರೇಗೌಡ್ರ ಎಂಬ ಅಭ್ಯರ್ಥಿ ಇಲಾಖೆ ನಿಯಮವನ್ನು ಗಾಳಿಗೆ ಈ ರೀತಿ ಅಸಂಬದ್ಧ ವರ್ತನೆ ತೋರಿದ್ದಾರೆ. ಪಿಎಸ್ಐ ಪರೀಕ್ಷೆ ಪಾಸ್ ಆದರೂ ಯುನಿಫಾರ್ಮ್ ಹಾಕಲು ಒಂದಷ್ಟು ಸಮಯ ಮತ್ತು ನಿಯಮಗಳಿವೆ. ಆದರೆ ಅವೆಲ್ಲವನ್ನೂ ಗಾಳಿಗೆ ತೂರಿ ಬಸವನಗೌಡ ಈ ರೀತಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.
ದುರಂತ ಅಂದ್ರೆ ನೇಮಕಾತಿ ಪ್ರಕ್ರಿಯೆ ಮುಗಿದು ಟ್ರೈನಿಂಗ್ ಮುಗಿಸಿ ಎರಡು ವರ್ಷದ ನಂತರ ಪಿಎಸ್‌ಐ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯವರೆಗೂ ಪ್ರೋಬೆಷನರಿ ಪಿಎಸ್‌ಐ ಎಂದು ಪರಿಗಣಿಸಿ ಹೆಗಲ ಮೇಲೆ ಸಿಂಗಲ್ ಸ್ಟಾರ್ ಧರಿಸಲು ಮಾತ್ರ ಅವಕಾಶ ಇರುತ್ತದೆ. ಆದರೆ ಬಸವನಗೌಡ ಎರಡು ಸ್ಟಾರ್ ಇರುವ ಯುನಿಫಾರ್ಮ್ ಧರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.
PublicNext
20/04/2022 10:21 pm