ಬೆಂಗಳೂರು: ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರು ಹಾಗೂ ಸ್ನೇಹಿತ ಸೈಮನ್ ಎಂಬಾತರು ಊಟಕ್ಕೆ ಹೋಗಿದ್ದರು. ನಿನ್ನೆ ಮಂಗಳವಾರ ಬೆಳಗಿನ 2-30ರ ಸುಮಾರಿಗೆ ಆರೋಪಿ ಸಾಹಿದ್ ಹಾಗೂ ಚಂದ್ರು ಗಾಡಿಗಳ ನಡುವೆ ಟಚ್ ಆಗಿದೆ. ಇದೇ ವಿಚಾರಕ್ಕೆ ಸಾಹಿದ್‌ನ ಇಬ್ಬರು ಸ್ನೇಹಿತರು ಹಾಗೂ ಚಂದ್ರು ಮತ್ತು ಸೈಮನ್ ನಡುವೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಕೊಲೆಯಾಗಿದೆ. ದುಷ್ಕರ್ಮಿಗಳು ಚಂದ್ರುವಿನ ಬಲತೊಡೆಗೆ ಇರಿದಿದ್ದಾರೆ. ಪೊಲೀಸ್ ತನಿಖೆಯಲ್ಲಿ ಮೂವರು ಆರೋಪಿಗಳು ಇರುವುದು ಕಂಡು ಬಂದಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.
ಇನ್ನು ಭಾಷೆ ವಿಚಾರಕ್ಕೆ ಕೊಲೆ ನಡೆದಿದೆ ಎಂದಿರುವ ಗೃಹ ಸಚಿವರ ಹೇಳಿಕೆ ಬಗ್ಗೆ ಕಮಲ್ ಪಂತ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
PublicNext
06/04/2022 12:19 pm