ಬೆಂಗಳೂರು: ಹೊರವಲಯ ಆನೇಕಲ್ ತಾಲ್ಲೂಕಿನ ಗೌರೇನಹಳ್ಳಿ ಬಳಿಯ ಕೋಳಿಪಾರಂನಲ್ಲಿದ್ದ ಶೆಡ್ ಮೇಲೆ ಆನೇಕಲ್ ಪೊಲೀಸರು ಮತ್ತು ಗೋ ಗ್ಯಾನ್ ಪ್ರಾಣಿ ದಯಾ ಸಂಘದವರು ದಾಳಿ ನಡೆಸಿದ್ದಾರೆ.
ಈ ವೇಳೆ ಕೋಳಿ ಫಾರಂ ಶೆಡ್ ನಲ್ಲಿದ್ದ 50 ಕ್ಕೂ ಹೆಚ್ಚು ಹಸು, ಎಮ್ಮೆ ಮತ್ತು ಕರುಗಳು ಕಂಡು ಬಂದಿವೆ. ಈ ಜಾಗದ ಮಾಲೀಕ ಪ್ರಕಾಶ್ ಎಂಬಾತ ಅಲೀ ಎಂಬುವವರಿಗೆ ಬಾಡಿಗೆಗೆ ನೀಡಿದ್ದ. ಆದ್ರೆ ಈ ಅಸಾಮಿ ಗೋವುಗಳನ್ನ ಖರೀದಿ ಮಾಡಿ ಕೋಳಿ ಫಾರಂ ಶೆಡ್ ಒಂದರಲ್ಲಿ ಅವುಗಳಿಗೆ ಸರಿಯಾದ ಆಹಾರ, ನೀರಿಲ್ಲದ ಹಾಗೆ ಕೂಡಿ ಹಾಕಿದ್ದ.
ಬಕ್ರೀದ್ ಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆ ಹೆಚ್ಚು ಗೋವುಗಳನ್ನ ಶೇಖರಿಸಿ ಕಟಾವು ಮಾಡಿ ಮಾಂಸ ಮಾರಾಟ ಮಾಡಲು ಸಂಗ್ರಹಿಸಿ ಇಡಲಾಗಿತ್ತು ಎಂದು ತಿಳಿದು ಬಂದಿದೆ.
ಅಲ್ಲಿದ್ದ ಸುಮಾರು ಐವತ್ತಕ್ಕೂ ಅಧಿಕ ಗೋವುಗಳನ್ನ ರಕ್ಷಣೆ ಮಾಡಿ ಅವುಗಳನ್ನ ತಮಿಳುನಾಡಿನ ಹೊಸೂರು ಬಳಿಯ ಗೋ ಶಾಲೆಗೆ ರವಾನಿಸಲಾಗಿದೆ. ಜೊತೆಗೆ ಅಕ್ರಮವಾಗಿ ನಡೆಯುತ್ತಿರುವ ಕಸಾಯಿಖಾನೆಗಳ ಬಗ್ಗೆಯು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.
Kshetra Samachara
27/06/2022 03:02 pm