ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಿನ್ನದಂಗಡಿಯಲ್ಲಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಆರೋಪಿಗಳನ್ನ 72 ಗಂಟೆಯಲ್ಲಿ ಹೆಡೆ ಮುರಿಕಟ್ಟಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ರು!

ಬೆಂಗಳೂರು: ಚಿನ್ನ ಚಿನ್ನ ಟೇಬಲ್‌ತುಂಬೆಲ್ಲಾ ಚಿನ್ನ, ಬರೋಬ್ಬರಿ ನಾಲ್ಕು ಕೆಜಿ ಬಂಗಾರದ ವಸ್ತುಗಳು ನೋಡುವವರ ಕಣ್ಣು ಕುಕ್ಕುವಂತಿತ್ತು. ಆದ್ರೆ ಇದೆಲ್ಲಾ ಯಾವ್ದೋ ಶೋ ರೂಮ್ ನಲ್ಲಿ ಇಟ್ಟಿರೋ ಚಿನ್ನ ಅಲ್ಲ. ಬದಲಿಗೆ ಕಳೆದ ನಾಲ್ಕು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯ ರಾಮ್ ದೇವ್ ಜ್ಯೂವೆಲ್ಲರಿ ಶಾಪ್‌ನಲ್ಲಿ ದೋರಡೆಕೋರು ಪಿಸ್ತೂಲ್ ತೋರಿಸಿ ದೋಚಿದ್ದ ಚಿನ್ನಾಭರಣ. ಬೆಳಂ ಬೆಳಿಗ್ಗೆ ಬೋಣಿ ಆಗ್ಲಿ ಅಂತ ಬಾಗಿಲು ತೆಗದು ಕುಂತಿದ್ದ ನೌಕರ ಧರ್ಮಪಾಲ್‌ಗೆ ಶಾಕ್ ಕಾದಿತ್ತು. ಕುತ್ತಿಗೆಗೆ ಚೈನ್ ತೋರಿಸಿ ಅಂತ ಬಂದ ದರೋಡೆಕೋರರು ಸೀದಾ ಧರ್ಮಪಾಲ್ ಕುತ್ತಿಗೆಗೆ ಗನ್ ಇಟ್ಟು 1.5 ಕೋಟಿ‌ ಚಿನ್ನಾಭರಣದ ಸಮೇತ ಎಸ್ಕೇಪ್ ಆಗಿದ್ರು.

ಎಸ್ಕೇಪ್ ಆದವರ ಬೆನ್ನು ಹತ್ತಿದ ಎಲೆಕ್ಟ್ರಾನಿಕ್ ಸಿಟಿ ಇನ್ಸ್ಪೆಕ್ಟರ್ ನಂಜೇಗೌಡ & ಟೀಮ್ ಆರೋಪಿಗಳ ಬೆನ್ನು ಹತ್ತಿ ಗುಜರಾತ್, ಮಹಾರಾಷ್ಟ್ರ ಅಂತ ರಾತ್ರೋ ರಾತ್ರಿ ವೆಹಿಕಲ್‌ಮಾಡ್ಕೊಂಡು ಆರೋಪಿಗಳ ಬೆನ್ನು ಹತ್ತಿದ್ರು. ಈ ವೇಳೆ ರಾಜಸ್ಥಾನದಲ್ಲಿ ಆರೋಪಿಗಳ ಸುಳಿವು ಪಡೆದಿದ್ದ ಇನ್ಸ್ಪೆಕ್ಟರ್ ನಂಜೇಗೌಡ, ಸಬ್ ಇನ್ಸ್ಪೆಕ್ಟರ್ ಈಶ್ವರ್ ಜೊತೆಗೆ ಒಂದು ಟೀಂ‌ನ ಮೂವ್ ಮಾಡಿದ್ರು. ಈ ವೇಳೆ ಆಕ್ಷನ್ ಸಿನಿಮಾದಂತೆ ಪೊಲಿಸ್ರ ಮೇಲೆ ಆರೋಪಿಗಳಾದ ರಾಮ್ ಸಿಂಗ್ ಮತ್ತು ರಾಹುಲ್ ಗುಂಡಿನ ದಾಳಿ ನಡೆಸಿದ್ರು. ಈ ವೇಳೆ ಪೊಲೀಸ್ರು ಏರ್ ಪೈರ್ ಮಾಡಿ ಆರೋಪಿಗಳ ಹೆಡೆ ಮುರಿಕಟ್ಟಿದ್ದಾರೆ.

ಇನ್ನೂ ಆರೋಪಿಗಳ ಪೈಕಿ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ರ ಈ ಕಾರ್ಯಕ್ಕೆ ಕುದ್ದು ‌ಕಮಿಷನರ್ ಪ್ರತಾಪ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಪ್ರಕರಣದ ಪ್ರಮುಖ ಆರೋಪಿಯಾದ ದೇವರಾಮ್ ಈ ಹಿಂದೆ ಕೂಡ ನಗರದಲ್ಲಿ ಹಲವು ರಾಬರಿ ಪ್ರಕರಣದಲ್ಲಿ ಭಾಗಿಯಗಿ ಜೈಲು ಸೇರಿದ್ದ. ಜೈಲಿನಿಂದ ಬಂದು ಮತ್ತೆ ದೊಡ್ಡಮಟ್ಟದಲ್ಲಿ ಡಕಾಯಿತ ಮಾಡಲು ಪ್ಲಾನ್ ಮಾಡಿದ್ದ.‌ಇನ್ನೂ ಪ್ರಕರಣ ಸಂಬಂಧ ದೇವರಾಮ್, ರಾಹುಲ್ ,ರಾಮ್ ಸಿಂಗ್, ಅನಿಲ್ ಬಂಧನವಾಗಿದ್ದು ಮತ್ತೊಬ್ಬ ಆರೋಪು ವಿಷ್ಣು ಪ್ರಸಾದ್ ಸಿಂಗ್ ತಲೆ ಮರೆಸಿಕೊಂಡಿದ್ದಾನೆ.

ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್

Edited By : Somashekar
PublicNext

PublicNext

08/07/2022 05:48 pm

Cinque Terre

49.62 K

Cinque Terre

0

ಸಂಬಂಧಿತ ಸುದ್ದಿ