ನಗರದಲ್ಲಿ ಶಂಕಿತ ಉಗ್ರನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ನಗರ ಪೊಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾತನಾಡಿದ್ದಾರೆ.
ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳ ನೆರವಿನಿಂದ ಶಂಕಿತ ಉಗ್ರನನ್ನ ವಶಕ್ಕೆ ಪಡೆಯಲಾಗಿದೆ. ಆದರೆ, ಓರ್ವನನ್ನ ಮಾತ್ರ ಈಗ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಶಂಕಿತ ಉಗ್ರ ಅಸ್ಸಾಂ ಮೂಲದವನಾಗಿದ್ದನು. ಈತ ತಿಲಕ್ ನಗರದಲ್ಲಿಯೇ ವಾಸವಾಗಿದ್ದ. ಡೆಲಿವರಿ ಬಾಯ್ ಆಗಿಯೇ ಕೆಲಸ ಮಾಡುತ್ತಿದ್ದ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ನಿನ್ನೆ ದಿನ ಚಿತ್ತೋರು ಬಳಿ ನಡೆದ ಅಪಘಾತದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಆದರೆ, ಗಾಯಗೊಂಡ ಪಿಎಸ್‌ಐ ಅನ್ನ ಹಾಸ್ ಮ್ಯಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೋರ್ವ ಕಾನ್ಸ್ಟೇಬಲ್ ನನ್ನ ಚಿತ್ತೂರು ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಲಾಗುತ್ತಿದೆ. ಇವರಿಬ್ಬರು ಪ್ರಾಣಾಯಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
PublicNext
25/07/2022 01:39 pm