ಸಿಲಿಕಾನ್ ಸಿಟಿಯಲ್ಲಿ ಯಾರು ಏನ್ ಕೆಲ್ಸ ಮಾಡ್ತಿದ್ದಾರೆ ಅಂತ ಹೇಳೋಕ್ಕಾಗಲ್ಲ.ಒಬ್ಬ ಯೂಟ್ಯೂಬರ್ ಅಂತ ಮುಖವಾಡ ಹಾಕೊಂಡಿದ್ದಾನೆ. ಇನ್ನೊಬ್ಬ ನಾನು ಪಿಜಿ ನಡಿಸ್ತಿದ್ದೀನಿ ಅಂತ ಬಿಲ್ಡಪ್ ಕೊಟ್ಟಿದ್ದವರು, ಈಗ ಸದ್ದಿಲ್ಲದೆ ಕೋಟಿ ಕೋಟಿ ಡ್ರಗ್ ಡೀಲ್ ಮಾಡಿ ಲಾಕ್ ಆಗಿದ್ದಾರೆ.
ಉದ್ಯಾನನಗರಿಯಲ್ಲಿ ಗಾಂಜಾ ಗಮ್ಮತ್ತು ಹಬ್ಸೋಕೆ ಮುಂದಾಗಿದ್ದ ಅಸ್ಫಾಕ್ ಮತ್ತು ಶಿಫಾಸ್ ನ ಬೇಗೂರು ಪೊಲೀಸ್ರು ಬಂಧಿಸಿದ್ದಾರೆ. ಶಿಫಾಸ್ ಮೂಲತಃ ಕೇರಳ ದವನ್ನು, ಅಸ್ಫಾಕ್ ಕರಾವಳಿ ಭಾಗದ ಬಂಟ್ವಾಳ ಮೂಲದವನು . ಶಿಫಾಸ್ ಯುಟ್ಯೂಬ್ ಚಾನೆಲ್ ಮಾಡ್ಕೊಂಡು ಅದ್ರ ಜೊತೆಗೆ ಈ ಡ್ರಗ್ಸ್ ಸಪ್ಲೈ ಮಾಡೋ ಕೆಲ್ಸ ಕೂಡ ಮಾಡ್ತಿರ್ತಾನೆ.
ಇವನ ಜೊತೆಗೆ ಬಂಟ್ವಾಳ ಮೂಲದ ಅಸ್ಫಾಕ್ ಮಡಿವಾಳದ ಹತ್ರ ಪಿಜಿ ನಡ್ಸೋ ರೀತಿ ಈ ಮಾದಕ ವಸ್ತುಗಳನ್ನ ಪಿಜಿಲಿ ಇರೋ ಹುಡುಗರಿಗೆ ಕಾಲೇಜ್ ಸ್ಟೂಡೆಂಟ್ಸ್ ಗಳಿಗೆ ಮಾರಾಟ ಮಾಡ್ತಿರ್ತಾರೆ. ಇವ್ರಿಬ್ರು ಆರೋಪಿಗಳು ಇದೀಗ ಬೇಗೂರು ಪೊಲೀಸರಿಗೆ ಸಿಕ್ಕಿದ್ದು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.
ಬೇಗೂರು ಪೊಲೀಸರು ಬಂಧಿಸಿರೋ ಆರೋಪಿಗಳಿಂದ ಬರೋಬ್ಬರಿ ಎರಡು ಕೆ.ಜಿ. 600ಗ್ರಾಂ ಹ್ಯಾಷಿಷ್ ಆಯಿಲ್ ಮತ್ತು ಆರೋಪಿಗಳ ಹತ್ರ ಇದ್ದ ವಾಹನಗಳನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮಾಡಲಾಗ್ತಿದೆ.ಒಟ್ಟಾರೆಯಾಗಿ ಪೊಲೀಸ್ರು ಎಷ್ಟೇ ಚುರುಕಾಗಿ ಕೆಲ್ಸ ಮಾಡ್ತಿದ್ರು ಕೂಡ ಅಪರಾಧ ಪ್ರಕರಣಗಳು ನಿರಂತರವಾಗಿ ಬೆಳಕಿಗೆ ಬರ್ತಾನೆ ಇವೆ.ಮಳೆ ನಿಂತ್ರು ಮಳೆ ಹನಿ ನಿಂತಿಲ್ಲ ಅನ್ನೋ ಹಾಗೇ ಎಷ್ಟೇ ಕಠಿಣ ಕಾನೂನು ಕ್ರಮಗಳಿದ್ರು ಕೂಡ ಈ ಮಾದಕ ವಸ್ತುಗಳ ನಿಯಂತ್ರಣ ಮಾತ್ರ ಸಾಧ್ಯ ಆಗ್ತಾನೇ ಇಲ್ಲ.
ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ, ಪಬ್ಲಿಕ್ ನೆಕ್ಸ್ಟ್
PublicNext
03/08/2022 06:40 pm