ಬೆಂಗಳೂರು: ದರ್ಶನ್ ಗೆ ಬ್ರೇಕ್ ಕೊಟ್ಟಿದ್ದ ಕರಿಯ ಚಿತ್ರದ ನಿರ್ಮಾಪಕ ಆನೇಕಲ್ ಬಾಲರಾಜ್ ಬೈಕ್ ಡಿಕ್ಕಿಯಾಗಿ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಬೆಳಗ್ಗೆ ಜೆ.ಪಿ. ನಗರದ ನಿವಾಸದ ಬಳಿ ವಾಕಿಂಗ್ಗೆ ತೆರಳಿದ್ದಾಗ ಅಪಘಾತ ಸಂಭವಿಸಿದ್ದು, ಕೂಡಲೇ ಬಾಲರಾಜ್ ರನ್ನ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದ್ದಾರೆ.ಬೆಳಗ್ಗೆ ವಾಕಿಂಗ್ ಮಾಡಲು ತೆರಳುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದಿದೆ. ಫುಟ್ ಪಾತ್ ಮೇಲೆ ಬಿದ್ದ ಅವರಿಗೆ ಗಂಭೀರವಾಗಿ ಗಾಯಾವಾಗಿದ್ದು ಘಟನೆ ಕುರಿತ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಬಾಲರಾಜ್, ಪ್ರೇಮ್ ನಿರ್ದೇಶನದ ಕರಿಯ, ಶ್ರೀನಿವಾಸ್ ಪ್ರಭು ನಿರ್ದೇಶನ ಮಾಡಿದ್ದ ‘ಕರಿಯ 2’ ಪುತ್ರನಿಗಾಗಿ ‘ಗಣಪ’ ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
Kshetra Samachara
16/05/2022 09:25 am