ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟಿ ಸಂಜನಾ ಹೀಗೆ ಮಾಡಬಾರದಿತ್ತು: ಕ್ಯಾಬ್ ಚಾಲಕನಿಂದ ಕಂಪ್ಲೇಂಟ್

ಬೆಂಗಳೂರು: ಡ್ರಗ್ಸ್ ಪ್ರಕರಣದಿಂದ ಜಾಮೀನು ಪಡೆದು ಹೊರಬಂದ ನಟಿ ಸಂಜನಾ ಹೊಸ ಕಿರಿಕ್ ಮಾಡಿಕೊಂಡಿದ್ದಾರೆ.

ಕ್ಯಾಬ್ ಚಾಲಕ ಎಸಿ ಪ್ರಮಾಣ ಹೆಚ್ಚು ಮಾಡಲು ಹೇಳಿದರೂ ಮಾಡಿಲ್ಲ ಎಂದು ಆರೋಪಿಸಿದ ನಟಿ ಸಂಜನಾ ಕಾರಿನ ನಂಬರ್ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಕಾರಿನ ಚಾಲಕ ನಮ್ಮ ಬೆಳಗಿನ ಮೂಡ್ ಹಾಳು ಮಾಡಿದ್ದಾನೆ ಎಂದಿದ್ದಾರೆ.

ಇದರಿಂದ ನೊಂದ ಕ್ಯಾಬ್ ಚಾಲಕ ಸುಸೇಮಣಿ, ಸಂಜನಾ ಅವರು ನನ್ನ ಮಾನಹಾನಿ ಮಾಡಿದ್ದಾರೆ. ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಬರೆದು ಅಪಪ್ರಚಾರ ಮಾಡಿದ್ದಾರೆ. ಮತ್ತು ಈ ಬಗ್ಗೆ ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

05/10/2021 09:19 pm

Cinque Terre

788

Cinque Terre

0

ಸಂಬಂಧಿತ ಸುದ್ದಿ