ಬೆಂಗಳೂರು: ಮಳೆಯಿಂದಾಗಿ ಓರ್ವ ಯುವಕನ ಪ್ರಾಣ ಹಾರಿ ಹೋದ್ರೆ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಟಿಪ್ಪರ್ ಲಾರಿ ಮತ್ತು ಸ್ಕೂಟರ್ ನಡುವೆ ನಗರದ ಕಾರ್ಪೋರೇಷನ್ ಬಳಿಯ ಪಲ್ಲವಿ ಥಿಯೇಟರ್ ಹತ್ತಿರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಯುವಕರ ಮೇಲೆ ಟಿಪ್ಪರ್ ಲಾರಿ ಹರಿದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ 12 ಗಂಟೆ ಸುಮಾರಿಗೆ ನಡೆದ ಘಟನೆ ನಡೆದಿದ್ದು ಹೋಂಡಾ ಆ್ಯಕ್ಟಿವಾ ಬೈಕ್ ನಲ್ಲಿ ಇಬ್ಬರು ಯುವಕರು ಹೋಗ್ತಿದ್ರು.ಈ ಮಳೆ ಇದ್ದಿದ್ದರಿಂದ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ ಎಂದು ಹೇಳಲಾಗ್ತಿದೆ. ಪಕ್ಕದಲ್ಲಿ ಬರ್ತಿದ್ದ ಲಾರಿ ಹರಿದು ಘಟನೆ ಸಂಭವಿಸಿದೆ.
ಮೊಹಮ್ಮದ್ ಅಲಿ ಜಿನ್ನಾ (22) ಮೃತ ಯುವಕನಾಗಿದ್ದು, ಸೈಯದ್ ಮೆಹರಾಜ್ ಅಹಮ್ಮದ್ (20) ಸ್ಥಿತಿ ಗಂಭೀರವಾಗಿದೆ. ರಂಜಾನ್ ಹಿನ್ನೆಲೆ ನಮಾಜ್ ಮುಗಿಸಿ ತೆರಳುತ್ತಿದ್ದ ಯುವಕರು ವ್ಹೀಲಿಂಗ್ ಮಾಡಲು ಹೋಗಿ ಆಯ ತಪ್ಪಿ ಬಿದ್ದಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯ ವಿಲ್ಸನ್ ಗಾರ್ಡನ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
PublicNext
19/04/2022 10:36 am