ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊಬೈಲ್ ರಾಬರ್ಸ್‌ನನ್ನ, ಕಾರಿನಿಂದ ಗುದ್ದಿ ಚೇಸ್ ಮಾಡಿದ ಮಾಜಿ‌ ಕಾರ್ಪೊರೇಟರ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಸುಕಿನಲ್ಲೆ ಮೊಬೈಲ್ ‌ಕಳ್ಳರ ಹಾವಳಿ ಮಿತಿ ಮೀರುತ್ತಿದೆ. ಬೆಳ್ಳಂಬೆಳಗ್ಗೆ ವಾಕಿಂಗ್‌ ಮಾಡ್ತಿದ್ದವರ ಮೊಬೈಲ್ ಕಸಿದು ಎಸ್ಕೆಪ್ ಆಗ್ತಿದ್ದ ಖದೀಮರನ್ನು ಸಿನಿಮೀಯ ಸ್ಟೈಲ್‌ನಲ್ಲಿ ಹಿಡಿಯಲು ಮಾಜಿ ಕಾರ್ಪೊರೇಟರ್ ಯತ್ನಿಸಿದ್ದಾರೆ.

ಇಂದು ಬೆಳಗಿನ ಜಾವ ಹೆಚ್‌ಆರ್‌ಬಿಆರ್ ಲೇಔಟ್‌ನ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಾರಿ ಹೋಕರ ಬಳಿ ಬೈಕ್‌ನಲ್ಲಿ ಬಂದ ಖದೀಮರಿಬ್ಬರು ಮೊಬೈಲ್ ಕಸಿದು ಪರಾರಿಯಾಗುತ್ತಿದ್ರು.

ಇದನ್ನ ಗಮನಿಸಿದ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ, ಕಳ್ಳರನ್ನ ಹಿಡಿಯಲು ತಮ್ಮ ಸ್ಕಾರ್ಪಿಯೋ ಕಾರಿನಲ್ಲಿ ಮೊಬೈಲ್ ಕಳೆದುಕೊಂಡವರನ್ನ ಕೂರಿಸಿಕೊಂಡು ಬೈಕ್‌ ಚೇಸ್ ಮಾಡಿದ್ದಾರೆ. ಸ್ವಲ್ಪ ದೂರ ಹೋಗ್ತಿದ್ದಂತೆ ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಸುಮಾರು 10 ಮೀಟರ್ ಅಷ್ಟು ದೂರ ಸ್ಕಿಡ್ ಆಗಿ‌ ಬಿದ್ದಿದ್ದಾರೆ. ತಕ್ಷಣ ಗಾಡಿ ಬಿಟ್ಟು ಎದ್ದ ಕಳ್ಳರು ಬೈಕ್‌ನಲ್ಲಿದ್ದ ಲಾಂಗ್ ಹಿಡಿದು ಬೆದರಿಸಲು ಮುಂದಾಗಿದ್ದಾರೆ.

ಆದರೂ ಕಳ್ಳರನ್ನ ಹಿಡಿಯಲು ಮುಂದಾದ ಗಣೇಶ್ ರೆಡ್ಡಿಯವರ ಸಾಹಸ ಕಂಡು ಮೊಬೈಲ್ ಎಸೆದು, ಲಾಂಗ್ ತೋರಿಸಿ ಹೆದರಿಸಿ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ಆಕ್ಷನ್ ಸೀನ್‌ಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

Edited By : Vinayak Patil
PublicNext

PublicNext

15/12/2024 07:42 pm

Cinque Terre

14.02 K

Cinque Terre

0

ಸಂಬಂಧಿತ ಸುದ್ದಿ