ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಜನರ ಪ್ರಾಣ ಅಂದ್ರೆ ಬಿಎಂಟಿಸಿಗೆ ಇಷ್ಟು ಕೇವಲ ಆಗೋಯ್ತಾ..?

ಬೆಂಗಳೂರು : ಜನರ ಪ್ರಾಣ ಅಂದ್ರೆ ಬಿಎಂಟಿಸಿ ಚಾಲಕನಿಗೆ ಅಷ್ಟೊಂದು ಕೇವಲ ಆಗಿ ಹೋಯ್ತಾ ಅನ್ನೋ ಆಕ್ರೋಶ ವ್ಯಕ್ತವಾಗಿದೆ... ಬಿಎಂಟಿಸಿ ಚಾಲಕನಿಂದ ಮತ್ತೊಂದು ಆ್ಯಕ್ಸಿಡೆಂಟ್ ಆಗಿದ್ದು, ದ್ವಿಚಕ್ರ ವಾಹನ ಸವಾರನನ್ನ ಕೆಳಗೆ ಬೀಳಿಸಿ ಜೂಟ್ ಆರೋಪ ಮಾಡಲಾಗಿದೆ.

ತನ್ನ ಪಾಡಿಗೆ ಸಂಚಾರ ಮಾಡ್ತಿದ್ದ ದ್ವಿಚಕ್ರ ವಾಹನ ಸವಾರ, ಬಿಎಂಟಿಸಿ ಗುದ್ದಿದ ಆರೋಪ ಇದೆ. ನಿಧಾನವಾಗಿ ಬಲಭಾಗಕ್ಕೆ ಬಿಎಂಟಿಸಿ ಬಸ್ ಬಂದಿದ್ದು, ದ್ವಿಚಕ್ರ ವಾಹನಕ್ಕೆ ಟಚ್ ಆಗಿ ಕೆಳಗಡೆ ಬಿದ್ದಿದ್ದಾರೆ..ಜಸ್ಟ್ ಯಾಮಾರಿದ್ರೂ ಸವಾರನ ತಲೆ ಮೇಲೆ ಬಸ್‌ನ ಚಕ್ರ ಹರಿಯುತ್ತಿತ್ತು..

ಶುಕ್ರವಾರ ಸಂಜೆ 6.10ಕ್ಕೆ ನಡೆದಿರುವ ಘಟನೆ ಇದಾಗಿದ್ದು ನಗರದ ಕಸ್ತೂರಬಾ ರಸ್ತೆಯಲ್ಲಿ ನಡೆದಿದೆ.

ಸವಾರ ಕೆಳಗಡೆ ಬಿದ್ದರೂ ಕೇರ್ ಮಾಡದೇ ಹೋದ ಬಸ್ ಚಾಲಕ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ...

Edited By : Shivu K
PublicNext

PublicNext

15/12/2024 06:08 pm

Cinque Terre

11.59 K

Cinque Terre

0