ಬೆಂಗಳೂರು: ನಿನ್ನೆ ಸುಮ್ಮನಹಳ್ಳಿ ಸಮೀಪ ಬಿಎಂಟಿಸಿ ಚಾಲಕನಿಗೆ ಹಲ್ಲೆ ಘಟನೆಯ ಬಗ್ಗೆ ಆಸ್ಪತ್ರೆಯಿಂದಲೇ ಮಹಿಳೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನಿನ್ನೆ ಮಧ್ಯಾಹ್ನ 2:15ರ ಸುಮಾರಿಗೆ ನನ್ನ ಮನೆಯಿಂದ ತಾಯಿ ಮನೆಗೆ ಹೊರಟಿದ್ದೆ. ಸುಮ್ಮನಹಳ್ಳಿ ಸಿಗ್ನಲ್ ನಿಂದ ಹಾರ್ನ್ ಮಾಡ್ಕೊಂಡು ಬಂದಿದ್ದ ಚಾಲಕ. ರೈಟ್ ಸೈಡ್ ನಲ್ಲಿ ಜಾಗ ಇದ್ದಿದ್ರಿಂದ ರೈಟ್ ಸೈಡ್ ಗೆ ಬಂದೆ. ಮುಂದೆ ಗಾಡಿ ನಿಂತಿದ್ರಿಂದ ಗಾಡಿ ನಿಲ್ಸಿದೆ. ಈ ವೇಳೆ ಬೇಕಂತಲೇ ಬಂದು ಚಾಲಕ ಬಸ್ ಗುದ್ದಿದ್ದ. ಈ ವೇಳೆ ನಾನು, ಮಗು ಕೆಳಗಡೆ ಬಿದ್ವಿ. ಘಟನೆಯಲ್ಲಿ ನಮಗೂ ಗಾಯವಾಗಿದೆ ಅಂತ ಆಸ್ಪತ್ರೆಯಿಂದಲೇ ಗಾಯಾಳು ಮಹಿಳೆ ಮಾಹಿತಿ ಕೊಟ್ಟಿದ್ದಾರೆ.
ನಿನ್ನೆ ಮಧ್ಯಾಹ್ನ ಸುಮ್ಮನಹಳ್ಳಿ ಬ್ರಿಡ್ಜ್ ಸಮೀಪ ಬರ್ತಾ ಇದ್ದ ಬಸ್ ಚಾಲಕನಿಗೆ, ಬೇಕು ಅಂತಲೇ ತನ್ನ ಗಾಡಿಗೆ ಬಸ್ ಟಚ್ ಮಾಡಿದ್ದಾನೆ ಅಂತ ಮಹಿಳೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ವೈರಲ್ ಆಗಿತ್ತು. ಆ ಘಟನೆ ಸಂಬಂಧ ಖುದ್ದು ಮಹಿಳೆಯೇ ಮಾಹಿತಿ ಕೊಟ್ಟಿದ್ದು ಸ್ಪಷ್ಟನೆ ಕೊಟ್ಟಿದ್ದಾರೆ.
PublicNext
15/12/2024 06:41 pm