ಬೆಂಗಳೂರು: ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ಮತ್ತೊಂದು ಕೇಸ್ ಮುನ್ನೆಲೆಗೆ ಬಂದಿದೆ. ಪತ್ನಿಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಸೈಯ್ಯದ್ ಸುಸೈಡ್ ಕೇಸ್ ಈಗ ಚರ್ಚೆ ಆಗ್ತಿದೆ. ಅತುಲ್ ಸುಭಾಷ್ ಸಾವಿನ ಮಧ್ಯೆ ಸೈಯದ್ ಸಾವಿನ ಕತೆ ಚರ್ಚೆ ಆಗ್ತಿದೆ.
ಅತುಲ್ ರೀತಿಯೇ ಜೀವ ಬಿಟ್ಟಿದ್ದ ಸೈಯ್ಯದ್ ಅಹ್ಮದ್ ಮಖ್ದೂಮ್, ಪತ್ನಿಯಿಂದ ನೊಂದು ಡೌರಿ ಕೇಸ್‌ನಲ್ಲಿ ಸಿಲುಕಿ ಸಾವಿಗೆ ಶರಣಾಗಿದ್ದ. 2009ರಲ್ಲಿ ಸೈಯ್ಯದ್ ಅಹ್ಮದ್ ಮಖ್ದೂಮ್ ಸುಸೈಡ್ ಕೇಸ್ ಸಂಚಲನ ಸೃಷ್ಟಿ ಉಂಟು ಮಾಡಿತ್ತು. ಹೆಂಡತಿಯಿಂದ ದೂರಾಗಿ ಮಗನನ್ನ ಕಾಣಲು ಬಿಡದ ಆರೋಪವಿದ್ದು, ಅಷ್ಟೇ ಅಲ್ಲ ವರದಕ್ಷಿಣೆ ಕೇಸ್ ಕೂಡ ದಾಖಲಾಗಿತ್ತಂತೆ.
ಮಗನ ಜೊತೆ ಸಮಯ ಕಳೆಯಲು ಬಿಟ್ಟಿಲ್ಲ ಅಂತ ಸೈಯ್ಯದ್ ಅಹ್ಮದ್ ಮಖ್ದೂಮ್ ನೇಣಿಗೆ ಶರಣಾಗಿದ್ದರು. ವಿಡಿಯೋ ಮಾಡಿ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟು ಆತ್ಮಹತ್ಯೆಗೆ ಶರಣು ಆಗಿದ್ದರು. ಆತ್ಮಹತ್ಯೆ ಮುಂಚೆ ಸಯ್ಯದ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗ್ತಿದೆ.
PublicNext
15/12/2024 12:50 pm