ಬೆಂಗಳೂರು: ನಿರ್ಮಾಣ ಹಂತದ ಏಳು ಅಂತಸ್ತಿನ ಕಟ್ಟಡದ ಮೇಲಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರೋ ಘಟನೆ ತಿಲಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ GNR ಕಲ್ಯಾಣ ಮಂಟಪ ಬಳಿ ನಿರ್ಮಾಣ ವಾಗ್ತಿದ್ದ ಕಟ್ಟದಲ್ಲಿ ಕೆಲಸ ಮಾಡ್ತಿದ್ದ ಗುಲ್ಬರ್ಗಾ ಮೂಲದ ಶರಣಪ್ಪ (42) ಸಾವನ್ನಪ್ಪಿದ್ದಾನೆ. ಏಳು ಅಂತಸ್ತಿನ ಕಟ್ಟಡ ಕಾಮಗಾರಿ ಸಾಗ್ತಿದ್ದು ಮೇಲೆ ನಿಂತು ಕೆಲಸ ಮಾಡ್ತಿದ್ದ ವೇಳೆ ಮೇಲಿನಿಂದ ಚಂದ್ರಪ್ಪ ಹಾಗೂ ಶರಣಪ್ಪ ಇಬ್ಬರೂ ಬಿದ್ದಿದ್ದಾರೆ.
ಘಟನೆಯಲ್ಲಿ ಶರಣಪ್ಪ ಸಾವನ್ನಪ್ಪಿದ್ರೆ, ಚಂದ್ರಪ್ಪನಿಗೆ ಗಂಭೀರ ಗಾಯವಾಗಿದ್ದು, ಜಯನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.
PublicNext
14/12/2024 05:48 pm