ಬೆಂಗಳೂರು : ರೈಲ್ವೆ ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮಹಿಳೆಯೊಬ್ಬರ ಜೀವ ಉಳಿದ ವಿಡಿಯೋ ವೈರಲ್ ಆಗಿದೆ.
ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಮಹಿಳೆಯನ್ನು ರೈಲ್ವೆ ಕಾನ್ಸ್ಟೇಬಲ್ ರಕ್ಷಿಸಿದ್ದಾರೆ. ಇನ್ನು ಮಹಿಳೆ ರೈಲು ಹತ್ತುವುದನ್ನು ಗಮನಿಸುತ್ತಿದ್ದ ಕಾನ್ ಸ್ಟೇಬಲ್ ಮಹಿಳೆ ನಿಯಂತ್ರಣ ತಪ್ಪುತ್ತಿದ್ದಂತೆ ರಕ್ಷಣೆಮಾಡಿದ್ದಾರೆ.
ಇಂದು ಮುಂಜಾನೆ 4.30ರ ಸುಮಾರಿಗೆ ಬಳ್ಳಾರಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಅದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗದಗಕ್ಕೆ ಹೋಗಲು ಹರಿಪ್ರಿಯ ಎಕ್ಸ್ಪ್ರೆಸ್ ಟ್ರೈನ್ ಹತ್ತುವ ವೇಳೆ ಈ ಅವಘಡ ಸಂಭವಿಸಿದೆ. ಸದ್ಯ ಕಾನ್ ಸ್ಟೇಬಲ್ ಮಾರುತಿ ಕಾರ್ಯಕ್ಕೆ ಎಲ್ಲೇಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಹಾಗೆಯೇ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
PublicNext
01/03/2022 05:13 pm