ಬೆಂಗಳೂರು: ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ದೊಡ್ಡ ಅನಾಹುತವೊಂದು ತಪ್ಪಿದೆ! ಗೇಟ್ ನಂ. 8ರಲ್ಲಿನ ಶೃಂಗಾರ್ ಪಾರ್ಟಿ ಹಾಲ್ ನ ಮೇಲ್ಛಾವಣಿ ಕುಸಿದು ಬಿದ್ದಿದೆ. ಇಲ್ಲಿ ಸದಾ ಹೈ ಫೈ ಫ್ಯಾಮಿಲಿಯಿಂದ ಹಲವು ಶುಭ ಸಮಾರಂಭ ನಡೆಯುತ್ತಿರುತ್ತವೆ. ಆ ಟೈಂನಲ್ಲಿ ಹಾಲ್ ಕುಸಿದಿದ್ರೆ ಭಾರಿ ದುರಂತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಅಂತಹದ್ದೊಂದು ದುರ್ಘಟನೆ ತಪ್ಪಿದೆ.
ಸದ್ಯ, ಘಟನೆಯಲ್ಲಿ ಐವರು ಕಾರ್ಮಿಕರಿಗೆ ಗಾಯವಾಗಿದ್ದು, ಇಬ್ಬರು ಕಾರ್ಮಿಕರ ಕೈ ಕಾಲು ಮುರಿದಿದೆ. ಪಾರ್ಟಿ ಹಾಲ್ ಡೆಕೋರೇಶನ್ ವೇಳೆ ಮೇಲ್ಛಾವಣಿ ಸಂಪೂರ್ಣ ನೆಲಸಮವಾಗಿದೆ. ಅರಮನೆ ಮೈದಾನದಲ್ಲಿ ದಶಕಗಳಿಂದ ಜಾಗ ಬಾಡಿಗೆ ಪಡೆದು ತಾತ್ಕಾಲಿಕ ಶೆಡ್ ರೂಪದಲ್ಲಿ ಪಾರ್ಟಿ ಹಾಲ್ ನಿರ್ಮಿಸಲಾಗಿತ್ತು. ದಶಕಗಳಿಂದಲೂ ದುರಸ್ತಿ ಮಾಡದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ಅರಮನೆ ಮೈದಾನದಲ್ಲಿ ಸಾಕಷ್ಟು ಹಾಲ್ ಗಳಿದ್ದು, ಅವು ಕುಸಿಯುವ ಮುನ್ನ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಸ್ಥಳಕ್ಕೆ ಸದಾಶಿವನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಸಂಜೆ ನಡೆದಿರೋ ಘಟನೆಯನ್ನು ಹಾಲ್ ಮಾಲೀಕ ಮತ್ತು ಸಿಬ್ಬಂದಿ ಪೊಲೀಸ್ರಿಗೂ ತಿಳಿಸದೆ ಮುಚ್ಚಿಡಲು ಪ್ರಯತ್ನ ಪಟ್ಟಿದ್ರು ಎಂದು ಹೇಳಲಾಗ್ತಿದೆ.
Kshetra Samachara
22/01/2022 10:16 pm