ಚಿಕ್ಕಮಗಳೂರು: ರೈತರ ಹಕ್ಕನ್ನು ಕಸಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ತಿಳಿಸಿದರು. ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ನಬಾರ್ಡ್ ನಿಂದ ರೈತರಿಗೆ ನೀಡುವ ಸಾಲದಲ್ಲಿ 58% ನಷ್ಟು ಕೇಂದ್ರ ಕಡಿತ ಮಾಡಿದೆ ಇದರಿಂದ ರೈತರು ದಿವಾಳಿಯಾಗುವ ಅನುಮಾನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ 100% ಸಾಲವನ್ನು ನೀಡಲಾಗುತ್ತಿತ್ತು ಇದೀಗ ಕೇಂದ್ರ ಸರ್ಕಾರ ರೈತರ ಮರಣ ಶಾಸನವನ್ನು ಬರೆಯಲು ಹೊರಟಿದೆ ಇದನ್ನು ವಿರೋಧಿಸಿ ಫೆ. 10 ರಂದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು
Kshetra Samachara
04/02/2025 04:25 pm