ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಶೀಘ್ರವೇ ಸರಿಪಡಿಸಿ

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಸುತ್ತಮುತ್ತ ನೆಟ್‌ವರ್ಕ್‌ ಸಮಸ್ಯೆ ಉದ್ಭವಿಸಿದ್ದು ಶೀಘ್ರವೇ ಸರಿಪಡಿಸಬೇಕು ಎಂದು ಕಡವಂತಿ ಗ್ರಾ. ಪಂ. ಸದಸ್ಯ ವಿನೋದ್ ಬಿಎಸ್‌ಎನ್‌ಎಲ್ ಜನರಲ್ ಮ್ಯಾನೇಜರ್ ಬಾಲಾಜಿ ಅವರಿಗೆ ಮನವಿ ಸಲ್ಲಿಸಿದರು. ಖಾಂಡ್ಯ ಹೋಬಳಿ ಬೊಗಸೆ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವ‌ರ್ ಕಳೆದ ಒಂದು ವರ್ಷದ ಹಿಂದೆ ನಿರ್ಮಾಣಗೊಂಡು ಸೇವೆ ಒದಗಿಸುತ್ತಿತ್ತು. ಆದರೆ, ಇತ್ತೀಚಿಗೆ ಸರಿಯಾಗಿ ನೆಟ್‌ವರ್ಕ್ ಸಿಗದೆ ದೂರವಾಣಿ ಕರೆ ಹಾಗೂ ಇಂಟರ್ನೆಟ್ ಗೂ ಬಹಳಷ್ಟು ಸಮಸ್ಯೆಯಾಗಿದೆ ಇದನ್ನು ಆದಷ್ಟು ಬೇಗ ಸರಿ ಪಡಿಸಿ ಎಂದು ಮನವಿ ಸಲ್ಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/02/2025 06:50 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ