ಕಳಸ: ಬೋರ್ಡ್ ನಲ್ಲಿ ಗ್ರಾಮದ ಹೆಸರನ್ನೇ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಳಸ-ಕುದುರೆಮುಖ ಸಂಪರ್ಕಿಸುವ ಮುಖ್ಯ ರಸ್ತೆಯಿಂದ ದೇವರ ಗುಡ್ಡಕ್ಕೆ ಹೋಗುವ ಮಾರ್ಗದಲ್ಲಿ ಹಳ್ಳಿಗಳ ಹೆಸರನ್ನು ಸೂಚಿಸುವ ನೂತನ ಬೋರ್ಡ್ ನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಕಿದ್ದು ಈ ಮಾರ್ಗದಲ್ಲಿ ಬರುವ ನಾಲ್ಕು ಗ್ರಾಮಗಳ ಪೈಕಿ ಮೂರು ಗ್ರಾಮಗಳ ಹೆಸರನ್ನು ಮಾತ್ರ ಹಾಕಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಕಳಸ ಗ್ರಾಮ ಪಂಚಾಯಿತಿಯಿಂದ ಹಾಕಿರುವ ನೂತನ ಬೋರ್ಡ್ ನಲ್ಲಿ ದೇವರಗುಡ್ಡ, ದೇವರ ಪಾಲು, ಬಿಳುಗೋಡು, ಗ್ರಾಮಗಳ ಹೆಸರಿದ್ದು ಕೋಣೆಬೈಲು ಗ್ರಾಮವನ್ನು ಕೈ ಬಿಡಲಾಗಿದೆ. ಮೊದಲೇ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಕೋಣೆಬೈಲು ಗ್ರಾಮದಲ್ಲಿ 15ಕ್ಕೂ ಹೆಚ್ಚು ಮನೆಗಳಿವೆ. ಈ ಗ್ರಾಮದಲ್ಲಿ ದಲಿತರೇ ಹೆಚ್ಚಾಗಿದ್ದಾರೆ. ಎಲ್ಲಾ ದಾಖಲೆಗಳಲ್ಲೂ ಗ್ರಾಮದ ಹೆಸರು ಸ್ಪಷ್ಟವಾಗಿ ಉಲ್ಲೇಖವಿದ್ದರೂ ಇದೀಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೋರ್ಡ್ ನಿಂದ ಹೆಸರು ಕೈಬಿಟ್ಟಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ.
Kshetra Samachara
05/02/2025 12:12 pm