", "articleSection": "Crime,Law and Order,Government", "image": { "@type": "ImageObject", "url": "https://prod.cdn.publicnext.com/s3fs-public/418299-1738568503-kodi.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಕಡೂರು: ರಾಜ್ಯ ಸರ್ಕಾರದ ಎಚ್ಚರಿಕೆಯ ನಂತರವೂ ಕೆಲ ಮೈಕ್ರೋ ಫೈನಾನ್ಸ್ ಗಳ ಕಾಟ ಮುಂದುವರೆದಿದೆ. ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ಒಂದು ವಾರದ...Read more" } ", "keywords": "Kadur, Microfinance Debt, Couple Flees Village, Karnataka News, Financial Crisis, Debt Trap, Microfinance Problems, Rural Karnataka, Financial Hardship.,Chikmagalur,Crime,Law-and-Order,Government", "url": "https://publicnext.com/node" } ಕಡೂರು: ಮೈಕ್ರೋ ಫೈನಾನ್ಸ್ ಕಾಟಕ್ಕೆ ಊರನ್ನೇ ಬಿಟ್ಟ ದಂಪತಿ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಡೂರು: ಮೈಕ್ರೋ ಫೈನಾನ್ಸ್ ಕಾಟಕ್ಕೆ ಊರನ್ನೇ ಬಿಟ್ಟ ದಂಪತಿ..!

ಕಡೂರು: ರಾಜ್ಯ ಸರ್ಕಾರದ ಎಚ್ಚರಿಕೆಯ ನಂತರವೂ ಕೆಲ ಮೈಕ್ರೋ ಫೈನಾನ್ಸ್ ಗಳ ಕಾಟ ಮುಂದುವರೆದಿದೆ. ಮೈಕ್ರೋ ಫೈನಾನ್ಸ್ ಕಾಟಕ್ಕೆ ಬೇಸತ್ತು ಒಂದು ವಾರದಿಂದ ದಂಪತಿ ಮನೆ ಬಿಟ್ಟಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಆಲದಹಳ್ಳಿಯ ಉಮೇಶ್ ನಾಯ್ಕ್ ಹಾಗೂ ಅವರ ತಂದೆ ಹೆಸರಲ್ಲಿ ಗ್ರಾಮ ಶಕ್ತಿ ಎಂಬ ಮೈಕ್ರೋ ಫೈನಾನ್ಸ್ ನಿಂದ 4 ಲಕ್ಷ ಗೃಹ ಸಾಲ ಪಡೆದಿದ್ರಂತೆ.

ಆದರೆ ಫೈನಾನ್ಸ್ ಕಂಪನಿಯವರು 30 ಸಾವಿರ ಕಟ್ ಮಾಡಿ 3 ಲಕ್ಷದ 70 ಸಾವಿರ ಹಣ ನೀಡಿದ್ದಾರೆ. ತಿಂಗಳಿಗೆ 12,600 ರಂತೆ 34 ತಿಂಗಳು ಕಂತು ಪಾವತಿಸಿದ್ದು, ಇದೀಗ ಫೈನಾನ್ಸ್ ಕಂಪನಿಯವರು 48 ತಿಂಗಳು ಕಂತು ಪಾವತಿಸಬೇಕು ಇಲ್ಲದಿದ್ದರೆ ನಿಮ್ಮ ಮನೆಗೆ ಬೀಗ ಹಾಕುತ್ತೇವೆ ಎಂದು ಪ್ರತಿನಿತ್ಯ ಬೆಳಗ್ಗೆ, ಸಂಜೆ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದಾರೆಂದು ಉಮೇಶ್ ನಾಯ್ಕ್ ಪತ್ನಿ ಜಯಲಕ್ಷ್ಮಿ ಆರೋಪಿಸಿದ್ದಾರೆ. ಹೀಗಾಗಿ ಗ್ರಾಮ ಶಕ್ತಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳಲಾರದೆ ಒಂದು ವಾರದಿಂದ ಉಮೇಶ್ ನಾಯ್ಕ್ ದಂಪತಿ ಊರನ್ನೇ ಬಿಟ್ಟಿದ್ದು, ನಮಗೆ ನೆಮ್ಮದಿ ದೊರಕಿಸಿ ಕೊಡಿ ಎಂದು ಚಿಕ್ಕಮಗಳೂರು ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ್ದಾರೆ.

Edited By : Ashok M
PublicNext

PublicNext

03/02/2025 01:11 pm

Cinque Terre

20.14 K

Cinque Terre

1