", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/405356-1738650948-kkkkk.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಮುಕ್ತ ಅನ್ನುತ್ತಿರುವ ಸರ್ಕಾರ ಹಾಗೂ ಜಿಲ್ಲಾಡಳಿತ. ಹೌದು. ಇದಕ್ಕೆ ಸಾಕ...Read more" } ", "keywords": "Chikkamagaluru, Red Rebels, Maoist Activity, Karnataka News, Naxalite Movement, Left Wing Extremism, Anti Naxal Operations, Police Crackdown, Red Corridor, India's Internal Security.,Chikmagalur,Law-and-Order,Government", "url": "https://publicnext.com/node" }
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಹಾಗೂ ಚಿಕ್ಕಮಗಳೂರು ಜಿಲ್ಲೆ ನಕ್ಸಲ್ ಮುಕ್ತ ಅನ್ನುತ್ತಿರುವ ಸರ್ಕಾರ ಹಾಗೂ ಜಿಲ್ಲಾಡಳಿತ.
ಹೌದು. ಇದಕ್ಕೆ ಸಾಕ್ಷಿ ಎಂಬಂತೆ ಪೊಲೀಸರ ಮೋಸ್ಟ್ ವಾಟೆಂಟ್ ಲಿಸ್ಟ್ ನಲ್ಲಿದ್ದೋರು ಶರಣಾಗತಿ, ಎನ್‌ಕೌಂಟರ್ ಹಾಗೂ ಅರೆಸ್ಟ್ ಆಗಿದ್ದಾರೆ.
ಇನ್ಯಾರು ಪಟ್ಟಿಯಲ್ಲಿಲ್ಲ ಅಂತಿದೆ ಜಿಲ್ಲಾಡಳಿತ. ಈಗಾಗಲೇ ಎನ್ ಕೌಂಟರ್, ಅರೆಸ್ಟ್, ಹೊರ ರಾಜ್ಯದಲ್ಲಿ ಶರಣಾಗತಿಯಾಗಿರೋರನ್ನ ಹೊರತುಪಡಿಸಿದ್ರೆ 22 ಮಂದಿ ಕರ್ನಾಟಕದಲ್ಲಿ ಶರಣಾಗಿದ್ದಾರೆ. ಅದರಲ್ಲಿ ಚಿಕ್ಕಮಗಳೂರಿನಲ್ಲಿ 21, ಶಿವಮೊಗ್ಗ ಒಬ್ಬರು ಹಾಗೂ ಉಡುಪಿಯಲ್ಲಿ ಕೊನೆಯ ಕೊಂಡಿ ತೊಂಬಟ್ಟು ಲಕ್ಷ್ಮಿ ಶರಣಾಗೋ ಮೂಲಕ ಕರ್ನಾಟದಲ್ಲಿ ಕೆಂಪು ಉಗ್ರರ ಹೆಜ್ಜೆಗಳು ಮುಕ್ತವಾದಂತಾಗಿದೆ.
ಇನ್ನು ಕೆಂಪು ಉಗ್ರರ ಹೆಜ್ಜೆಯಂತೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇಲ್ಲ. ಆದರೆ ಶರಣಾಗೋ ಸಮಯದಲ್ಲಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆವೆಲ್ಲವೂ ನಕ್ಸಲ್ ಪೀಡಿತ ಪ್ರದೇಶದ ಸಮಸ್ಯೆಗಳು. ಇದಲ್ಲದೆ ಮೂಲಭೂತ ಸೌಕರ್ಯಗಳಿಲ್ಲ ಅನ್ನೋ ಅರೋಪವನ್ನು ಅಲ್ಲಿನ ಜನರು ಮಾಡ್ತಾ ಇದ್ದಾರೆ. ಈಗ ಜಿಲ್ಲಾಡಳಿತ ಅಂದ್ರೆ ಡಿಸಿ, ಎಸ್ಪಿ ಇಬ್ಬರು ಎಲ್ಲ ಇಲಾಖೆಗಳಿಗೊಂದು ಸೂಚನೆ ಹೊರಡಿಸಿದ್ದಾರೆ. ಪ್ರತಿಯೊಂದು ಇಲಾಖೆಯಿಂದಲೂ ಸರ್ವೆ ಆಗಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ಇಂಚಿಂಚೂ ಮಾಹಿತಿ ಬೇಕು. ಅದು ವರದಿ ರೂಪದಲ್ಲಿ ಅಂತ ಕೆಲವು ವಾರ ಗಡುವು ನೀಡಿದ್ದು ಆ ವರದಿ ಕೈಸೇರಿದ ಮೇಲೆ ಮತ್ತೊಂದು ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸೋಕೆ ಪ್ಲಾನ್ ಮಾಡಿದೆ ಜಿಲ್ಲಾಡಳಿತ.
ಒಟ್ಟಾರೆ ಪಶ್ಚಿಮ ಘಟ್ಟಗಳ ಸಾಲಿನ ಎರಡು ದಶಕದ ಕೆಂಪು ಉಗ್ರರ ಹೆಜ್ಜೆಗೆ ಎಳ್ಳು ನೀರು ಬಿಟಾಯ್ತು. ನಕ್ಸಲ್ ಪೀಡಿತ ಹಣೆ ಪಟ್ಟಿಯಲ್ಲಿರೋ ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಇನ್ನು ಸರ್ಕಾರ, ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು
PublicNext
04/02/2025 12:06 pm