ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡ ಶಾಲೆಗೆ ಬಣ್ಣ ಬಳೆದ ಹಳೇ ವಿದ್ಯಾರ್ಥಿಗಳು

ಹುಬ್ಬಳ್ಳಿ : ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿರುವ ಕನ್ನಡ ಸರ್ಕಾರಿ ಗಂಡು ಮತ್ತು ಹೆಣ್ಣು ಮಕ್ಕಳ ನಂಬರ್ 4 ಶಾಲೆ, ಸುಮಾರು ಹತ್ತು ಹದಿನೈದು ವರ್ಷಗಳಿಂದ ಬಣ್ಣವಿಲ್ಲದೆ ಹಾಳಾಗಿತ್ತು. ಇದ‌ನ್ನು ನೋಡಿದ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ನಿಸರ್ಗ ಫೌಂಡೇಶನ್ ಜೊತೆ ಕೈ ಜೋಡಿಸಿ, ಎರಡು ದಿನದಲ್ಲಿ ಇಡೀ ಶಾಲೆಗೆ ಬಣ್ಣ ಹಚ್ಚುವ ಮೂಲಕ ಶಾಲೆಗೆ ಸಿಂಗರಿಸಿ ಮಕ್ಕಳ ಮುಖದಲ್ಲಿ ಸಂತೋಷ ಮೂಡಿಸಿ, ಶಾಲೆಯ ಅಕ್ಕಪಕ್ಕದ ಹಿರಿಯ ಜನರಿಗೆ ಬಣ್ಣ ಹಚ್ಚುವ ಕೆಲಸ ನೋಡಿ ಸಂತೋಷ ಪಟ್ಟರು.

ಈ ಶಾಲೆಗೆ ಅಶುದ್ಧ ವಾತಾವರಣವನ್ನು ಶುದ್ಧಪಡಿಸಿ ಎಲ್ಲಾ ಶಿಕ್ಷಕರಿಗೆ ಶಾಲೆಯ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸುವಂತೆ ಹೇಳಿ, ಹಳೆ ವಿದ್ಯಾರ್ಥಿಗಳ ಸಂಘದ ಈ ಕಾರ್ಯಕ್ಕೆ ಶಾಲೆಯ ಅಕ್ಕ ಪಕ್ಕ ಜನರು ಪಾಲಕರು, ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.

Edited By : Suman K
Kshetra Samachara

Kshetra Samachara

03/02/2025 03:59 pm

Cinque Terre

29.89 K

Cinque Terre

4

ಸಂಬಂಧಿತ ಸುದ್ದಿ