ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಳೆದ ಬಾರಿ ಸುರಿದ ಅತಿವೃಷ್ಟಿಯಿಂದ ಹೊನ್ನಮ್ಮನ ಹಳ್ಳದ ಹೊನ್ನಮ್ಮ ದೇವಿಯ ದೇವಾಲಯಕ್ಕೆ ಹಾನಿಯಾಗಿತ್ತು. ಇದೀಗ ದಾನಿಗಳ ಸಹಕಾರದಿಂದ ದೇವಾಲಯವನ್ನು ಪುನರ್ ಪ್ರತಿಷ್ಠಾಪಿಸಿ ಹೊನ್ನಮ್ಮ ದೇವಿಯ ವಿಗ್ರಹ ದ ಪ್ರತಿಷ್ಠಾಪನೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಹೊನ್ನಮ್ಮನ ಹಳ್ಳವು ದತ್ತಪೀಠಕ್ಕೆ ತೆರಳುವ ಪ್ರವಾಸಿಗರಿಗೆ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದು, ದತ್ತಮಾಲಾಧಾರಿಗಳು ಇಲ್ಲಿ ತಮ್ಮ ಮಾಲೆಯನ್ನು ವಿಸರ್ಜಿಸುವ ಸ್ಥಳವೂ ಆಗಿದೆ. ಸದ್ಯ ದಾನಿಗಳ ಕೃಪೆಯಿಂದ ಈ ದೇವಾಲಯ ತನ್ನ ಗತವೈಭವಕ್ಕೆ ಮರಳಿದೆ.
Kshetra Samachara
02/02/2025 06:19 pm