", "articleSection": "Public News,Religion", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/419120_1737987538_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "DanielChikkamangaluru" }, "editor": { "@type": "Person", "name": "9481623116" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಮಗಳೂರು: ತಾಜೀರಾನ್ ಮಸೀದಿ, (ಲಬಾಬೀನ್) ಮದರಸ ಮದೀನತುಲ್ ಉಲೂಮ್ ಮತ್ತು ಶಾದಿ ಮಹಲ್ ಆಡಳಿತ ಮಂಡಳಿ ಚುನಾವಣೆಯನ್ನು ತತ್ಕಾಲಿಕವಾಗಿ ರದ್ದು ಮ...Read more" } ", "keywords": "Node,Chikmagalur,Public-News,Religion The Muslim Council Trust in Chikkamagaluru is protesting against the Madrasa Board elections, demanding that they be cancelled. This development highlights the ongoing debates surrounding madrasa education in India, with some arguing that it needs modernization and others emphasizing its importance in preserving Islamic culture and traditions.,Religion", "url": "https://publicnext.com/node" } ಚಿಕ್ಕಮಗಳೂರು: ಮದರಸ ಮಂಡಳಿ ಚುನಾವಣೆ ರದ್ದುಪಡಿಸಲು ಮುಸ್ಲಿಂ ಕೌನ್ಸಿಲ್ ಟ್ರಸ್ಟ್ ಆಗ್ರಹ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮದರಸ ಮಂಡಳಿ ಚುನಾವಣೆ ರದ್ದುಪಡಿಸಲು ಮುಸ್ಲಿಂ ಕೌನ್ಸಿಲ್ ಟ್ರಸ್ಟ್ ಆಗ್ರಹ

ಚಿಕ್ಕಮಗಳೂರು: ತಾಜೀರಾನ್ ಮಸೀದಿ, (ಲಬಾಬೀನ್) ಮದರಸ ಮದೀನತುಲ್ ಉಲೂಮ್ ಮತ್ತು ಶಾದಿ ಮಹಲ್ ಆಡಳಿತ ಮಂಡಳಿ ಚುನಾವಣೆಯನ್ನು ತತ್ಕಾಲಿಕವಾಗಿ ರದ್ದು ಮಾಡಬೇಕೆಂದು ಎಂದು ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಕೌನ್ಸಿಲ್ ಟ್ರಸ್ಟ್ ಅಧ್ಯಕ್ಷ ಸೈಯದ್ ಜಮೀಲ್ ಅಹಮ್ಮದ್ ತಿಳಿಸಿದರು. ಮೂರು ಸಂಸ್ಥೆಗಳ ಲಕ್ಷಾಂತರ ರೂ. ಹಣ ಅವ್ಯವಹಾರವಾಗಿದ್ದು, ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಜ.31ರಂದು ಆಡಳಿತ ಮಂಡಳಿ ಸಭೆ ಕರೆಯಲಾಗಿದೆ. ಲಕ್ಷಾಂತರ ರೂ. ಹಣ ಅವ್ಯವಹಾರವಾಗಿರುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಸಭೆ ಹಾಗೂ ಚುನಾವಣೆಯನ್ನು ರದ್ದುಪಡಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಕಳೆದ 20 ವರ್ಷಗಳಿಂದ ಲೆಬಾಬಿನ್ ಮಸೀದಿ ಹಾಗೂ ಮದರಸ ಇ ಮದೀನಾತುಲ್ ಉಲೂಂ, ತಾಜ್‌ರಾನ್ ಶಾದಿ ಮಹಲ್ ಅಧ್ಯಕ್ಷರಾಗಿದ್ದ ಹಾಗೂ ಸದ್ಯ ಮಾಜಿ ಅಧ್ಯಕ್ಷರಾಗಿರುವವರು ತಮ್ಮ ಅವಧಿ ಮುಕ್ತಾಯಗೊಂಡ ಬಳಿಕ ಸಮರ್ಪಕವಾಗಿ ಅಧಿಕಾರ ವರ್ಗಾವಣೆ ಮಾಡಿಲ್ಲವೆಂದು ದೂರಿದರು. 20 ವರ್ಷಗಳಿಂದ ಹೊಸಬರಿಗೆ ಸದಸ್ಯತ್ವ ನೀಡಿಲ್ಲ.

ಸಂಸ್ಥೆಗಳ ಲೆಕ್ಕಪತ್ರ ಪರಿಶೀಲನೆ ನಡೆಸದೇ ತಮ್ಮ ಇಚ್ಛಾನುಸಾರ ಲೆಕ್ಕಪತ್ರ ಗಳನ್ನು ನೀಡಿ ಲಕ್ಷಾಂತರ ರೂ. ಲೂಟಿ ಮಾಡಲಾಗಿದೆ. ಹಿಂದಿನ ಅಧ್ಯಕ್ಷರು ಅಧಿಕಾರ ದುರುಪಯೋಗಪಡಿಸಿಕೊಂಡು ಸಂಸ್ಥೆಯ ಸ್ವತ್ತನ್ನು ಸ್ವಂತ ಲಾಭಕ್ಕಾಗಿ ಕಾನೂನು ಬಾಹಿರವಾಗಿ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಸಂಬಂಧ ಕರ್ನಾಟಕ ವಕ್ಛ್ ಬೋರ್ಡ್ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿಸಿದರು.ತಾಜೀರಾನ್ ಮಸೀದಿ, (ಲಬಾಬೀನ್) ಮದರಸ ಮದೀನತುಲ್ ಉಲೂಮ್ ಮತ್ತು ಶಾದಿ ಮಹಲ್ ಆಡಳಿತ ಮಂಡಳಿ ಸಭೆ ಹಾಗೂ ಚುನಾವಣೆಯನ್ನು ತತ್ಕಾಲಿಕವಾಗಿ ರದ್ದುಪಡಿಸಬೇಕು. ಅವ್ಯವಹಾರ ತನಿಖೆ ನಡೆಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾ ಯಿಸಿದ ಅವರು, ಈ ಸಂಬಂಧ ಲೋಕಾಯುಕ್ತರದಲ್ಲಿ ದೂರು ಸಲ್ಲಿಸಲಾಗುವುದು ಮತ್ತು ಕಾನೂನಾತ್ಮಕ ಹೋರಾಟವನ್ನು ನಡೆಸಲಾಗುವುದು ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

27/01/2025 07:48 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ