ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ, ಪುನರುತ್ಥಾನವಾಗುತ್ತದೆ -ಶಾಸಕ ತಮ್ಮಯ್ಯ

ಚಿಕ್ಕಮಗಳೂರು: ದೇವಾಲಯಗಳನ್ನು ನಿರ್ಮಾಣ

ಮಾಡುವುದು ಸುಲಭದ ಕಾರ್ಯವಲ್ಲ ನೂತನ

ದೇವಾಲಯಗಳ ನಿರ್ಮಾಣದಿಂದ ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು

ಸಂಸ್ಕೃತಿಗಳ ಪುನರುತ್ಥಾನವಾಗುತ್ತದೆ ಎಂದು

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಡಿ

ತಮ್ಮಯ್ಯ ಹೇಳಿದರು. ಚಿಕ್ಕಮಗಳೂರು ತಾಲ್ಲೂಕು, ಲಕ್ಯಾ ಹೋಬಳಿಯ ಕೆ.ಬಿ.ಹಾಳ್ ಗ್ರಾಮದಲ್ಲಿ ಇಂದು ಶ್ರೀ ದುರ್ಗಾಬದೇವಿ ನೂತನ ದೇವಾಲಯ ಲೋಕಾರ್ಪಣೆ, ವಿಗ್ರಹ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಪೂರ್ವಿಕರು ಆಚರಿಸಿ ಬೆಳಿಸಿಕೊಂಡು ಬಂದಿರುವ ಸಂಸ್ಕಾರಯುತ ಕಾರ್ಯಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿಕೊಡಬೇಕು ಎಂದರು. ಯಾವುದೇ ದೇವಾಲಯಗಳ ನಿರ್ಮಾಣದ ನಂತರ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಅದರ ನಿರ್ವಾಹಣೆಯ ಕಾರ್ಯವು ವ್ಯವಸ್ಥಿತವಾಗಿರಬೇಕು. ದೇವಾಲಯಗಳಿಗೆ ತೆರಳಿ ಹೋರ ಬಂದ ಮಾನಸಿಕವಾಗಿ ಶಾಂತಿಯುತವಾಗಿರಲು ಸಾಧ್ಯವಾಗುತ್ತದೆ ಎಂದ ಅವರು ಪ್ರತಿಯೊಬ್ಬರೂ ದೇವರು, ಗುರು ಹಿರಿಯರನ್ನು ಪೂಜಿಸಿ ಗೌರವಿಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಿ

ಎಂದರು.

Edited By : PublicNext Desk
Kshetra Samachara

Kshetra Samachara

31/01/2025 09:49 pm

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ