ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಜಾತ್ರೆಯ ಮಹಾಪ್ರಸಾದಕ್ಕೆ ಬಂತು 11 ಕ್ವಿಂಟಾಲ್ ಬೆಲ್ಲ

ಧಾರವಾಡ : ಅನ್ನದಾಸೋಹ, ವಿದ್ಯಾದಾಸೋಹದ ಮೂಲಕ ಪ್ರಸಿದ್ಧಿ ಪಡೆದ ಧಾರವಾಡ ಮುರುಘಾಮಠದ ಜಾತ್ರಾ ಮಹೋತ್ಸವ ಫೆ.3 ರಂದು ನಡೆಯಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರ ಪ್ರಸಾದಕ್ಕಾಗಿ ಧಾರವಾಡದ ಮೃತ್ಯುಂಜಯ ಮಾರುಕಟ್ಟೆಯ ಹಮಾಲರ ಸಂಘದವರು ಬರೊಬ್ಬರಿ 11 ಕ್ವಿಂಟಾಲ್ ಬೆಲ್ಲವನ್ನು ಕೊಡಿಸಿದ್ದಾರೆ.

ಎತ್ತಿನ ಬಂಡಿ ಮುಖಾಂತರ ಆ ಬೆಲ್ಲವನ್ನು ಧಾರವಾಡದ ಮುರುಘಾಮಠಕ್ಕೆ ಹಮಾಲರ ಸಂಘದವರು ತಂದು ಕೊಟ್ಟಿದ್ದಾರೆ. ಹಮಾಲರ ಸಂಘದ ಅಧ್ಯಕ್ಷ ಸಹಾದೇವ ತಹಶೀಲ್ದಾರ, ಅಲ್ಲಾಭಕ್ಷ ನವಲಗುಂದ, ರಾಜು ಸಿದ್ದಕ್ಕನವರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.

Edited By : Manjunath H D
Kshetra Samachara

Kshetra Samachara

01/02/2025 07:49 pm

Cinque Terre

24.24 K

Cinque Terre

2

ಸಂಬಂಧಿತ ಸುದ್ದಿ