ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫೆಬ್ರವರಿ 5ರಿಂದ ಹುಬ್ಬಳ್ಳಿಯಲ್ಲಿ ಸ್ವಾವಲಂಬನೆ ಪರಿಕಲ್ಪನೆ, ಸ್ವದೇಶಿ ಬೃಹತ್ ಮೇಳ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಸ್ವದೇಶಿ ಉತ್ಪನ್ನಗಳ ಪರಿಚಯಿಸುವುದರ ಜೊತೆಗೆ ಅಗತ್ಯತೆಯನ್ನು ಮನವರಿಕೆ ಮಾಡುವ ಸದುದ್ದೇಶದಿಂದ ಇದೇ ಫೆಬ್ರವರಿ 05 ರಿಂದ 09ರ ವರೆಗೆ ಹುಬ್ಬಳ್ಳಿಯ ವಿದ್ಯಾನಗರದ ಹೊಸ ಕೋರ್ಟ್ ಹಿಂಭಾಗದಲ್ಲಿರುವ ಕಲ್ಲೂರು ಲೇಔಟ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ವದೇಶಿ ಮೇಳದ ಸಂಯೋಜಕರಾದ ಜಯತೀರ್ಥ ಕಟ್ಟಿ ಹಾಗೂ ಕ್ಷೇತ್ರ ಸಂಚಾಲಕರಾದ ಜಗದೀಶ್ ಹೇಳಿದರು.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸ್ವದೇಶಿ ಜಾಗರಣ ಮಂಚ್-ಕರ್ನಾಟಕ ಆಯೋಜಿಸಿರುವ ಬಹುದೊಡ್ಡ ಸ್ವದೇಶಿ ಮೇಳ, ದೇಶಿಯ ಉತ್ಪನ್ನ, ದೇಶಿಯ ಆಹಾರ, ದೇಶದ ಕಲೆ, ಸಂಸ್ಕೃತಿ ಹಾಗೂ ದೇಶಿಯ ಪರಂಪರೆಯನ್ನು ಗ್ರಾಹಕರ ಮನೆ ಮನ ತಲುಪುವ ನಿಟ್ಟಿನಲ್ಲಿ ಇಂತಹದೊಂದು ಬೃಹತ್ ಮೇಳವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ವದೇಶಿ ಮೇಳದ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.

Edited By : Vinayak Patil
Kshetra Samachara

Kshetra Samachara

01/02/2025 01:08 pm

Cinque Terre

18.47 K

Cinque Terre

0

ಸಂಬಂಧಿತ ಸುದ್ದಿ