ಧಾರವಾಡ: ಯುವಶಕ್ತಿಯೇ ದೇಶದ ಶಕ್ತಿ ಎಂಬ ಮಾತನ್ನು ಸರ್ವರೂ, ಸರ್ವರಂಗವೂ ನಂಬಿರುವ ಬಹುದೊಡ್ಡ ನಿದರ್ಶನ. ಇಂತಹದೊಂದು ಯುವ ಶಕ್ತಿಗೆ ಸ್ಪೂರ್ತಿ ನೀಡುವ ಕಾರ್ಯಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರಾದ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಮುಂದಾಗಿದ್ದು, ಭವ್ಯ ಭಾರತದ ನಿರ್ಮಾಣದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತ ಸಾಧನೆ ಮಾಡಲು ಯುವ ಶಕ್ತಿ ಪೂರಕವಾಗಿದೆ ಎಂಬ ಸಂದೇಶ ಸಾರಿದ್ದಾರೆ.
ವಿದ್ಯಾರ್ಥಿಗಳಲ್ಲಿ ಬಹುದೊಡ್ಡ ಶಕ್ತಿ ಇದೆ. ಯುವ ಆವಿಷ್ಕಾರಿಗಳು, ಯುವ ಸಂಶೋಧಕರು ಹಾಗೂ ಸ್ಪೂರ್ತಿದಾಯಕ ಯುವ ಸಮುದಾಯ ಭವ್ಯ ಭಾರತದ ಕನಸನ್ನು ನನಸು ಮಾಡಲು ಸಾಧ್ಯ ಎಂಬುವಂತ ಸಂದೇಶವನ್ನು ಯುವ ಸಮುದಾಯಕ್ಕೆ ಪರಿಚಯಿಸಿದ್ದಾರೆ.
ಹೌದು..ಧಾರವಾಡದ ಐಐಟಿಯಲ್ಲಿ ಆಯೋಜಿಸಲಾಗಿದ್ದ ಫ್ಲ್ಯಾಗ್‌ಶಿಪ್ ಟೆಕ್ನಿಕಲ್ ಫೆಸ್ಟ್ ಅನ್ನು ಉದ್ಘಾಟನೆ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮೂಲಕ ಸಾಮಾಜಿಕ ಕಾರ್ಯದ ಜೊತೆಗೆ ಸಾಕಷ್ಟು ಇನೋವೇಶನ್ ಮಾಡಿರುವ ಸಾಧಕರು ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್.
ಐದನೇ ಆವೃತ್ತಿಯಲ್ಲಿ ನಡೆಯುತ್ತಿರುವ PARSEC 5.0 ದೇಶಾದ್ಯಂತ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಉದ್ಯಮ ವೃತ್ತಿಪರರನ್ನು ಆಕರ್ಷಿಸುವುದನ್ನು ಮುಂದುವರೆಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಕೇಂದ್ರೀಕರಿಸಿದ ಸ್ಪರ್ಧೆಗಳು, ಕಾರ್ಯಾಗಾರಗಳು ಮತ್ತು ಮುಖ್ಯ ಭಾಷಣಗಳು ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಫೆಸ್ಟ್ ಒಳಗೊಂಡಿದ್ದು, ಇಂತಹದೊಂದು ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಯುವ ಸಮುದಾಯಕ್ಕೆ ಬಹುದೊಡ್ಡ ಸ್ಫೂರ್ತಿದಾಯಕ ಮಾಹಿತಿ ನೀಡಿದರು.
PARSEC 5.0 ನಲ್ಲಿ ಪರಿಶೋಧಿಸಲಾದ ಪ್ರಮುಖ ವಿಷಯಗಳು ರೊಬೊಟಿಕ್ಸ್ ಮತ್ತು AI, ಯಂತ್ರ ಕಲಿಕೆ ಮತ್ತು ಬಾಹ್ಯಾಕಾಶ ಡೇಟಾ ವಿಜ್ಞಾನ, 3D ಮಾಡೆಲಿಂಗ್ ಮತ್ತು ಸಸ್ಟೈನಬಲ್ ಇನ್ನೋವೇಶನ್, ಬ್ಲಾಕ್‌ಚೈನ್ ಮತ್ತು ಸೈಬರ್‌ಸೆಕ್ಯುರಿಟಿ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಸ್ವಾಯತ್ತ ವ್ಯವಸ್ಥೆಗಳು, AR/VR ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ವಿನೂತನ ರೀತಿಯಲ್ಲಿ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಡಾ.ಸಿ.ಎಚ್.ವಿ.ಎಸ್.ವಿ ಪ್ರಸಾದ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.
ಇನ್ನೂ ರಾಷ್ಟ್ರೀಯ ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಡಾ.ವಿ.ಎಸ್.ವಿ ಪ್ರಸಾದ್ ಅವರು ಯುವ ಸಮುದಾಯವನ್ನು ಪ್ರೇರೇಪಿಸಿದರು. ಭಾರತದ ಪ್ರಗತಿಯನ್ನು ಚಾಲನೆ ಮಾಡುವಲ್ಲಿ ನಾವೀನ್ಯತೆ, ಸಮರ್ಪಣೆ ಮತ್ತು ಮುಂದಾಲೋಚನೆಯ ವಿಧಾನದ ಮಹತ್ವವನ್ನು ಒತ್ತಿ ಹೇಳಿದರು. ದೇಶವು ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಈ ಗುಣಗಳು ಅತ್ಯಗತ್ಯ ಎಂದು ಪ್ರತಿಪಾದಿಸಿದರು. ರಾಷ್ಟ್ರೀಯ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವದ ಕಡೆಗೆ ಒಟ್ಟಾಗಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/01/2025 11:07 pm