", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1737279391-h.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivanandaHaliyal" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಳಿಯಾಳ : ಕಳೆದ 50 ವರ್ಷದಿಂದ ಶಾಸಕರಾಗಿ ಕೆಲಸ ಮಾಡುತ್ತಿದ್ದೇನೆ ಹಾಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ದೇಶಪಾಂಡೆ ಹೇಳುತ್ತಲೇ ಬಂ...Read more" } ", "keywords": "Hanumanth Harijan, Haliyal Issue, Karnataka Politics, Apology, Controversial Statement, Indian Social Issues, Caste Politics, Karnataka News,Uttara-Kannada,Politics", "url": "https://publicnext.com/node" }
ಹಳಿಯಾಳ : ಕಳೆದ 50 ವರ್ಷದಿಂದ ಶಾಸಕರಾಗಿ ಕೆಲಸ ಮಾಡುತ್ತಿದ್ದೇನೆ ಹಾಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಎಂದು ಶಾಸಕ ದೇಶಪಾಂಡೆ ಹೇಳುತ್ತಲೇ ಬಂದಿದ್ದಾರೆ. ಆದರೆ 50 ವರ್ಷದ ಹಿಂದೆ ಹಳಿಯಾಳ ಹೇಗೆ ಇತ್ತು ಈಗಲೂ ಹಾಗೇಯೇ ಇದೆ. ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಹನುಮಂತ್ ಹರಿಜನ ಹೇಳಿದಾಗ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಾಗ ಕ್ಷಮೆಯಾಚಿಸಿದ ಘಟನೆ ಶನಿವಾರ ನಡೆದಿದೆ.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರಿಗೆ ಸಲಹೆ ನೀಡುವ ಅವಕಾಶ ಕಲ್ಪಿಸಲು ಸಭೆ ಕರೆಯಲಾಗಿತ್ತು ಶಾಸಕ ಆರ್ ವಿ ದೇಶಪಾಂಡೆ ಅವರು ಸಾಕಷ್ಟು ಅಭಿವೃದ್ಧಿಯ ಕೆಲಸ ಮಾಡಿದ್ದಾರೆ ಹಳಿಯಾಳ ತಾಲೂಕು ರಾಜ್ಯಕ್ಕೆ ಮಾದರಿ ತಾಲೂಕು ಆಗಿದೆ ಶಾಸಕರು ಅಭಿವೃದ್ಧಿ ಮಾಡಿಲ್ಲ ಎಂಬ ಮಾತನ್ನು ಹಿಂಪಡೆಯಬೇಕು ಮಾತು ಹಿಂಪಡೆಯದಿದ್ದರೆ ಸಭೆ ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.
ಸಭೆಯಲ್ಲಿ ಕೇವಲ ಅಭಿವೃದ್ಧಿ ಹಾಗೂ ಪ್ರಗತಿಪರ ಕಾಮಗಾರಿಗಳ ಬಗ್ಗೆ ತಮಗೆ ಸಲಹೆ ನೀಡಲು ಸಭೆಗೆ ಕರೆದಿದ್ದಾರೆ ಹೊರತು ಆಪಾದನೆ ಮಾಡಲು ಕರೆದಿಲ್ಲ ಎಂದು ಕಿಡಿಕಾರಿದರು. ಕ್ಷಮೆಯಾಚಿಸಲು ಆಗ್ರಹಪಡಿಸಿದ ಸದಸ್ಯರು ಹನುಮಂತ ಹರಿಜನ ಮಾತನಾಡಿದ ಮಾತನ್ನು ಹಿಂಪಡೆದ ನಂತರ ಸಭೆ ಮುಂದುವರೆಯಿತು.
ಏನು ಅಭಿವೃದ್ಧಿ ಮಾಡಬೇಕಾದ ಕೆಲಸ ಬಗ್ಗೆ ಹೇಳಲಿ ಅದನ್ನ ಹೊರತುಪಡಿಸಿ ಶಾಸಕರ ಬಗ್ಗೆ ಟೀಕೆ ಮಾಡಿರುವುದನ್ನು ನಾವು ವಿರೋಧಿ ವ್ಯಕ್ತಪಡಿಸಿದ್ದೇವೆ. ಸಭೆಯಲ್ಲಿ ಪುರಸಭೆ ಸದಸ್ಯನಿಗೆ ಏಕವಚನದಿಂದ ಮಾತನಾಡಿರುವುದನ್ನು ನಾವು ಕ್ಷಮೆ ಕೇಳಲು ಆಗ್ರ ಮಾಡಿದ್ದೇವೆ ಅವರು ಕ್ಷಮೆ ಕೋರಿದ್ದಾರೆ.
ಮುಂದಿನ ದಿನಗಳಲ್ಲಿ ಇಂತಹ ಘಟನೆ ಆಗದಂತೆ ಪುರಸಭೆ ಮುಖ್ಯ ಅಧಿಕಾರಿ ಅವರು ಕ್ರಮ ಕೈಗೊಳ್ಳಬೇಕು. ಸಭೆಯಲ್ಲಿ ಸದಸ್ಯರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಸಭೆಗೆ ಕರೆದ ಸಂದರ್ಭದಲ್ಲಿ ಸಂಬಂಧಪಟ್ಟ ಸಲಹೆ ಅವರು ಲಿಖಿತ ರೂಪದಲ್ಲಿ ನೀಡಲು ಅವಕಾಶ ಮಾಡಿಕೊಡಬೇಕು. ಎಂದು ನಾಮ ನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ ತಿಳಿಸಿದರು.
ಕಳೆದ ಐವತ್ತು ವರ್ಷಗಳಿಂದ ಹಳಿಯಾಳದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದಕ್ಕೆ ಜನರೇ ಸಾಕ್ಷಿ ಇದ್ದಾರೆ. 9 ಬಾರಿ ಕ್ಷೇತ್ರದ ಜನ ಶಾಸಕರನ್ನಾಗಿ ಆಯ್ಕೆ ಮಾಡಲು ಕಾರಣ ಅವರು ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಭಿವೃದ್ಧಿ ಆಗಿಲ್ಲ ಎನ್ನುವುದು ತಪ್ಪು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಶಾಸಕರ ಬಗ್ಗೆ ಬೇಜವಾಬ್ದಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ ಹೇಳಿದರು.
PublicNext
19/01/2025 03:07 pm