ಸಿದ್ದಾಪುರ : ಆರಾಧನಾ ಯೋಜನೆಯಡಿಯಲ್ಲಿ ತಾಲೂಕಿನ ಹೊನ್ನೆಗಟಗಿ ಶ್ರೀ ನಾಗ ಚೌಡೇಶ್ವರಿ ದೇವಸ್ಥಾನಕ್ಕೆ ರೂ 1.50 ಲಕ್ಷ ಧನ ಸಹಾಯ ಮಂಜೂರು ಆದ ಹಣ ಬಿಡುಗಡೆ ಆಗದೆ ವಿಳಂಬವಾಗಿತ್ತು ಕಳೆದ ತಿಂಗಳು ಸಿದ್ದಾಪುರದ ತಾಲೂಕು ಆಡಳಿತ ಸೌಧದಲ್ಲಿ ನಡೆದ ಲೋಕಾಯುಕ್ತರ ಸಭೆಯಲ್ಲಿ ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ನಂದನ ಬೋರಕರರವರು ಶೀಘ್ರ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದರು. ಸ್ಪಂದಿಸಿದ ಅಧಿಕಾರಿಗಳು ಹಣ ಬಿಡುಗಡೆ ಮಾಡಿರುವುದಕ್ಕೆ ಶ್ರೀ ನಾಗ ಚೌಡೇಶ್ವರಿ ದೇವಸ್ಥಾನ ಸಮಿತಿವತಿಯವರು ತಹಸೀಲ್ದಾರ್ ಅವರಿಗೆ ಸನ್ಮಾನಿಸಿ ಪ್ರಕಟಣೆ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಶಿರಸಿ ಸಿದ್ದಾಪುರ ಕ್ಷೇತ್ರದ ಮಾಜಿ ಶಾಸಕ ಉ ಕ ಜಿಲ್ಲಾ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಥಳೀಯ ಶಾಸಕ ಭೀಮಣ್ಣ ನಾಯ್ಕರಿಗೆ ,ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತ ಅಧಿಕಾರಿಗಳಿಗೆ,ತಹಸೀಲ್ದಾರರಿಗೆ ಹಾಗೂ ನಂದನ ಬೋರ್ಕರ್ ಅವರಿಗೆ ಮತ್ತು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷ ರಮೇಶ ಡಿ ಚನ್ನಯ್ಯ, ಕಾರ್ಯದರ್ಶಿ ರಮೇಶ ಎನ್ ಚನ್ನಯ್ಯ ಪ್ರಮುಖರಾದ ಮಂಜುನಾಥ ಚನ್ನಯ್ಯ, ರವಿ ಚನ್ನಯ್ಯ, ರಾಜೇಶ ಭಂಡಾರಿ, ತೋಟಪ್ಪ ನಾಯ್ಕ, ಎಚ್. ಎನ್ ಕಿರಣ ಕುಮಾರ, ಇನ್ನಿತರರಿದ್ದರು.
Kshetra Samachara
04/02/2025 08:34 pm