ಸಿದ್ದಾಪುರ: ತಾಲೂಕಿನಲ್ಲಿ ಶವವನ್ನು ಸಾಗಿಸಲು ಮುಕ್ತಿ ವಾಹನ ಇಲ್ಲದೇ ಜನರು ಪರಿತಪಿಸುತ್ತಿದ್ದು ಶಾಸಕರಾದ ಭೀಮಣ್ಣ ನಾಯ್ಕ ಅವರು ಆದಷ್ಟು ಬೇಗನೆ ಅದನ್ನು ಪೂರೈಸುವಂತೆ ಜಿಲ್ಲಾ ರೈತ ಸಂಘದ ಮಾಧ್ಯಮ ವಕ್ತಾರ ಇಲಿಯಾಸ್ ಇಬ್ರಾಹಿಂ ಸಾಬ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು ತಾಲೂಕಿನಲ್ಲಿ ಮೃತದೇಹವನ್ನು ಅಂತಿಮ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಇಂದಿನ ದಿನದಲ್ಲಿ ಕೆಲವು ಕಡೆಗಳಲ್ಲಿ ಕನಿಷ್ಠ 4 ಜನ ಸಹ ಸಿಗುತ್ತಿಲ್ಲ. ಶ್ರೀಮಂತರು ಆಂಬುಲೆನ್ಸ್ ಗೆ ಸಾವಿರಾರು ಹಣ ನೀಡಿ ಮೃತ ದೇಹವನ್ನು ಸಂಸ್ಕಾರ ಮಾಡುತ್ತಾರೆ ಆದರೇ ಬಡವರು ಹಣ ನೀಡದ ಪರಿಸ್ಥಿತಿ ಇದ್ದು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾರಣಕ್ಕಾಗಿ ತಾಲೂಕಿಗೆ ಶಾಸಕರು ಮುಕ್ತಿ ವಾಹನವನ್ನು ನೀಡುವಂತೆ ಅವರು ತಿಳಿಸಿದ್ದಾರೆ.
Kshetra Samachara
04/02/2025 12:32 pm