ಕಾರವಾರ : ಹೊನ್ನಾವರದಲ್ಲಿ ನಡೆದ ಗೋ ಹತ್ಯೆ ಪ್ರಕರಣವನ್ನ ಮುಸ್ಲಿಂ ಸಮಾಜದ ಪರವಾಗಿ ಖಂಡಿಸುತ್ತೇವೆ ಎಂದು ತಜೀಂ ಸಂಘಟನೆ ಅಧ್ಯಕ್ಷ ಇನಾಯಿತುಲ್ಲಾ ಶಾಬಾಂದ್ರಿ ಹೇಳಿದರು.
ನಗರದ ಮಾತನಾಡಿದ ಅವರು, ಗೋ ಹತ್ಯೆ ಪ್ರಕರಣದಲ್ಲಿ ಭಟ್ಕಳದ ಹೆಸರು ಬರುತ್ತಿದೆ. ಗೋ ಹತ್ಯೆ ಮಾಡಿದವರನ್ನ ಭಟ್ಕಳದವರೆಂದು ಒಪ್ಪುವುದಿಲ್ಲ. ಈ ಹಿಂದೆಯೋ ರಿಯಾಜ್ ಭಟ್ಕಳ ಎಂದು ಭಟ್ಕಳದ ಹೆಸರು ಸೇರಿಸಿ ಹೆಸರು ಹಾಳು ಮಾಡಲಾಗಿತ್ತು. ಈಗ ಭಟ್ಕಳದಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಎಲ್ಲರೂ ಒಂದಾಗಿದ್ದೇವೆ. ಆದರೆ ಗೋ ಹತ್ಯೆ ಮಾಡಿದ ಪ್ರಕರಣದಲ್ಲಿ ಭಟ್ಕಳದ ಹೆಸರು ತಂದಿರುವುದು ಬೇಸರ ತಂದಿದೆ ಎಂದರು.
ಹೊನ್ನಾವರದ ಗೋ ಹತ್ಯೆ ಪ್ರಕರಣದಲ್ಲಿ ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನ ಮಾಡಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರು ಮುಖ್ಯಂಮತ್ರಿ, ಗೃಹ ಸಚಿವರು ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಮ್ಮ ಖಂಡನೆ ಇದೆ. ಅವರ ಸರಕಾರದ ಅವಧಿಯಲ್ಲಿ ಏನು ಮಾಡಿದ್ದರು ಎಂದು ಹೇಳಲಿ ಎಂದರು.
Kshetra Samachara
30/01/2025 08:59 pm