", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737876557-saddu.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivanandaHaliyal" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹೊನ್ನಾವರ : ಉತ್ತರ ಕನ್ನಡದ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ದನದ ಕಾಲು, ತಲೆ ಕಡಿದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಎಸೆದು ದೇಹದ ಮಾಂಸ ಮಾತ್...Read more" } ", "keywords": "Honnavar News, Cow Slaughter Case, Faizal Arrested, Police Action, Karnataka Crime, Honnavar Police, Animal Cruelty, Cow Protection, Coastal Karnataka News.,Uttara-Kannada,Crime,Law-and-Order", "url": "https://publicnext.com/node" }
ಹೊನ್ನಾವರ : ಉತ್ತರ ಕನ್ನಡದ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ದನದ ಕಾಲು, ತಲೆ ಕಡಿದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಎಸೆದು ದೇಹದ ಮಾಂಸ ಮಾತ್ರವೇ ಕದ್ದೊಯ್ದಿದ್ದ ದಾರುಣ ಪ್ರಕರಣದಲ್ಲಿ ಪೊಲೀಸರು ಯಶಸ್ಸು ಸಾಧಿಸಿದ್ದಾರೆ.
ಅತ್ಯಂತ ವಿಕೃತವಾಗಿ ಗೋಹತ್ಯೆ ಮಾಡಿದ್ದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಫೈಝಿಲ್ ಕಾಲಿಗೆ ಗುಂಡೇಟು ಬಿದ್ದಿದೆ.
ಹೊನ್ನಾವರದ ಕಾಸರಕೋಡಿನ ಸಮೀಪದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಆರೋಪಿಯನ್ನು ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದಾರೆ. ಸಾಲ್ಕೋಡುವಿನ ಕೊಂಡಕುಳಿ ಗ್ರಾಮದಲ್ಲಿ ಗರ್ಭಧರಿಸಿದ್ದ ಹಸುವನ್ನು ಆರೋಪಿಗಳು ಅತ್ಯಂತ ದಾರುಣವಾಗಿ ಹತ್ಯೆ ಮಾಡಿದ್ದರು. ಹಸುವನ್ನು ಹತ್ಯೆ ಮಾಡಿದ ಬಳಿಕ ಮಾಂಸವನ್ನು ಮದುವೆ ಕಾರ್ಯಕ್ರಮಕ್ಕೆ ದುರ್ಷರ್ಮಿಗಳು ಪೂರೈಸಿದ್ದರು.
ಪ್ರಕರಣ ಸಂಬಂಧಿಸಿ ನಿನ್ನೆ ಆರೋಪಿ ಹೊನ್ನಾವರ ವಲ್ಕಿಯ 41 ವರ್ಷದ ತೌಫೀಕ್ನನ್ನು ಪೊಲೀಸರು ಬಂಧಿಸಿದ್ದರು. ಇಂದು ಇನ್ನೋರ್ವ ಆರೋಪಿ ಫೈಝಿಲ್ ಬಂಧನದ ವೇಳೆ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ಈ ವೇಳೆ ಆತನ ಕಾಲಿಗೆ ಗುಂಡು ಹಾಕಲಾಗಿದೆ.
PublicNext
26/01/2025 12:59 pm