ಕಾರವಾರ: ರಸ್ತೆಯ ಬದಿಯಲ್ಲಿದ್ದ ಜಾನುವಾರುಗಳನ್ನು ಕದಿಯುತ್ತಿದ್ದವರು ಇದೀಗ ಕೊಟ್ಟಿಗೆ ನಿಗ್ಗಲು ಮುಂದಾಗಿದ್ದು ಇದ ಖಂಡನೀಯ ಎಂದು ವಕೀಲ ನಾಗರಾಜ ನಾಯಕ ಹೇಳಿದ್ದಾರೆ.
ನಾಗರಾಜ ನಾಯಕ ಮಾತನಾಡಿ ಜಿಲ್ಲೆಯಲ್ಲಿ ಸನಾತನ ಸಂಸ್ಕೃತಿ ಇರಬೇಕು. ಇಲ್ಲಿನ ಆಡಳಿತವೂ ಅದರಂತೆಯೇ ನಡೆಯಬೇಕು. ಆದರೆ ಹೊನ್ನಾವರದ ಸಾಲಕೋಡದಲ್ಲಿ ಗೋವಿನ ತಲೆ ಕಡಿದು ವಿಕೃತಿ ಮೆರೆದಿದ್ದಾರೆ. ಚಾಮರಾಜ ನಗರದಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಮರೆಮಾಚುವಷ್ಟರಲ್ಲಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಬಿಣಿ ಹಸುವಿನ ಹತ್ಯೆ ನಡೆದಿದೆ ಎಂದರೆ ಇದರ ಹಿಂದೆ ದೊಡ್ಡ ಜಾಲವಿದ್ದಂತೆ ಕಾಣುತ್ತದೆ ಎಂದರು.
ಕೊಟ್ಟಿಗೆ ನುಗ್ಗುತ್ತಿರುವ ಇಂತವರಿಂದ ಜಿಹಾದಿ ಮನಸ್ಥಿತಿಯು ಅತಿಯಾಗಿದೆ. ಕೇವಲ ದೂರು ದಾಖಲಿಸಿವ ಮೂಲಕ ನ್ಯಾಯ ಸಿಗಲ್ಲ. ಈ ಹಿಂದೆ ಮುಂಡಗೋಡದ ಪ್ರಕರಣ ಒಂದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಗುಂಡು ಹಾರಿಸಿದ್ದರು. ಅದೇ ರೀತಿ ಹಸುವಿನ ಹತ್ಯೆ ಮಾಡಿದವರಿಗೆ ಗುಂಡು ಹಾರಿಸಬೇಕು ಎಂದರು.
Kshetra Samachara
21/01/2025 05:15 pm