", "articleSection": "Crime,Law and Order,Nature,Government", "image": { "@type": "ImageObject", "url": "https://prod.cdn.publicnext.com/s3fs-public/229640-1737825984-aranya.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Basu Mundagod" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಶ್ರೀಗಂಧದ ಮರ ಕಳ್ಳರ ಪಾಲಾಗಿದ್ದು, ಶನಿವಾರ ಬೆಳಕಿಗೆ ಬಂದಿದೆ....Read more" } ", "keywords": "Mundagod, Sandalwood tree theft, crime news, Karnataka news, forest crime, tree theft, sandalwood smuggling, Mundagod police, Karnataka forest department, stolen sandalwood, tree cutting, forest protection.,Uttara-Kannada,Crime,Law-and-Order,Nature,Government", "url": "https://publicnext.com/node" }
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ಶ್ರೀಗಂಧದ ಮರ ಕಳ್ಳರ ಪಾಲಾಗಿದ್ದು, ಶನಿವಾರ ಬೆಳಕಿಗೆ ಬಂದಿದೆ.
ನ್ಯಾಸರ್ಗಿ ಗ್ರಾಮದ ಅನಿತ್ ಥಾಮಸ್ ಎಂಬುವರ ಮನೆಯ ಹಿತ್ತಲಿನಲ್ಲಿ ಬೆಳೆದ ಸುಮಾರು 16 ವರ್ಷಗಳ ಶ್ರೀಗಂಧದ ಮರವನ್ನು ಕಳ್ಳರು ಕಡಿದು ಸಾಗಿಸಿದ್ದಾರೆ.
ಶ್ರೀಗಂಧ ಮರದ ಟೊಂಗೆಗಳನ್ನು ಕತ್ತರಿಸಿ ಅಲ್ಲೇ ಬಿಟ್ಟು, ಬುಡವನ್ನು ಗರಗಸದಿಂದ ಕತ್ತರಿಸಿ ಕಾಂಡವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಮರ ಸಾಕಷ್ಟು ಕಳ್ಳತನವಾಗುತ್ತಿದೆ. ಆದರೆ, ಅರಣ್ಯ ಇಲಾಖೆಯವರ ಕೈಗೆ ಕಳ್ಳರು ಸಿಗುತ್ತಿಲ್ಲ. ಕಳ್ಳರನ್ನು ಹಿಡಿಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆಯೇ? ಎಂದು ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿದೆ.
ಪಟ್ಟಣದ ಹಲವು ಕಡೆ ಸಿಸಿ ಕ್ಯಾಮೆರಾ ಇದ್ದರೂ ಅರಣ್ಯ ಇಲಾಖೆಯವರು ಕಳ್ಳರನ್ನು ಹಿಡಿದಿಲ್ಲ! ಇನ್ನು ಗ್ರಾಮೀಣ ಭಾಗದಲ್ಲಿ ಮರ ಕಳ್ಳತನ ಮಾಡಿದವರನ್ನು ಹಿಡಿಯಲು ಸಾಧ್ಯವೇ? ಎಂದು ಗ್ರಾಮಸ್ಥರು ಮಾತನಾಡುವಂತಾಗಿದೆ.
PublicNext
25/01/2025 10:56 pm