", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1736938695-WhatsApp-Image-2025-01-15-at-4.27.46-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ManjunathBhatkal" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿ ಮೂಡಭಟ್ಕಳ ಅಂಡರ್ ಪಾಸ್ ಕುರಿತು ಜನರ ಮನವೊಲಿಸಲು ಬಂದ ಸಂಸದ ಕಾಗೇರಿಯವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು...Read more" } ", "keywords": "Bhatkal News, Underpass Construction, MP Kageri, Public Protest, Karnataka Infrastructure, Bhatkal Development, Underpass Project, Local Resistance, Karnataka News.,Uttara-Kannada,Politics", "url": "https://publicnext.com/node" }
ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿ ಮೂಡಭಟ್ಕಳ ಅಂಡರ್ ಪಾಸ್ ಕುರಿತು ಜನರ ಮನವೊಲಿಸಲು ಬಂದ ಸಂಸದ ಕಾಗೇರಿಯವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು, ಜನರ ಸಮಸ್ಯೆಗಳಿಗೆ ಉತ್ತರಿಸಲಾಗದೆ ಅಳ್ವೆಕೋಡಿಯಲ್ಲಿ ಗುರುಗಳ ಕಾರ್ಯಕ್ರಮವಿದೆ ಎಂದು ಅಲ್ಲಿಂದ ಪಲಾಯನ ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಕೇತಪೈ ನಾರಾಯಣ ದೇವಸ್ಥಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅಂಡರ್ ಪಾಸ್ ಕುರಿತು ಪ್ರಸ್ತಾವಿಸಿದರು. ಈಗ ನಮ್ಮ ಬಳಿ ಕೇವಲ 2 ಅವಕಾಶ ಇದೆ. ಒಂದು ಈಗಾಗಲೇ ಮಂಜೂರಾಗಿದ್ದ ನಕ್ಷೆಯನ್ನು ಮುಂದುವರೆಸುವುದು. ಬಳಿಕ ಕೇಂದ್ರ ಸರ್ಕಾರದ ಅನುದಾನ ತಂದು ಮುಂದಿನ ಅಭಿವೃದ್ಧಿ ಮಾಡುವುದು. ಇನ್ನೊಂದು ಹೊಸ ಅನುದಾನಕ್ಕಾಗಿ ಮನವಿ ಸಲ್ಲಿಸಿ ಅದು ಬರುವವರೆಗೂ ಕಾಯುವುದು, ಆದರೆ ಅದು ಎಷ್ಟು ವಿಳಂಬವಾಗುತ್ತದೋ ತಿಳಿಯದು. ಹಾಗಾಗಿ ನಾವು ಮೊದಲ ಅವಕಾಶವನ್ನು ಉಪಯೋಗಿಸಿಕೊಂಡು ಮಂಜೂರಾಗಿದ್ದ ನಕ್ಷೆಯಂತೆಯೇ ಹೆದ್ದಾರಿ ವಿಸ್ತರಣೆ ಮುಗಿಸುವುದು ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.
ಸಂಸದರ ಮಾತು ಕೇಳುತ್ತಿರುವಂತೆ ಆಕ್ರೋಶಗೊಂಡ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಅಂಡರ್ ಪಾಸ್ ಇಲ್ಲದೇ ಹೆದ್ದಾರಿ ವಿಸ್ತರಣೆ ಮಾಡಲು ಅವಕಾಶ ನೀಡುವುದಿಲ್ಲ. ಕಳೆದ ಐದು ವರ್ಷಗಳಿಂದ ಬರಿ ಭರವಸೆಗಳನ್ನು ಮಾತ್ರ ಕೇಳುತ್ತಿದ್ದೇವೆ. ಮೊದಲು ನಕ್ಷೆ ತಯಾರಿಸುವಾಗ ಸ್ಥಳೀಯರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈಗಾಗಲೇ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ನಮ್ಮ ಜಿಲ್ಲೆಯ ಎಲ್ಲಾ ಸೇತುವೆಗಳನ್ನು ಈಗಾಗಲೇ ಬಂದ್ ಮಾಡಿ ಒಂದೇ ಸೇತುವೆಯಲ್ಲಿ ಸಂಚಾರ ಮಾಡುವಂತಾಗಿದೆ. ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದ್ದು ಸಾವು ನೋವುಗಳು ಸಂಭವಿಸುತ್ತಿವೆ. ಇದಕ್ಕೆಲ್ಲಾ ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ತಮ್ಮ ಅಸಮಾಧಾನ ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ನಾನು ಹೊಸಬನಿದ್ದು, ಈ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯಪ್ರವೃತ್ತನಾಗಿದ್ದೇನೆ ಎಂದರೂ ಸಮಾಧಾನಗೊಳ್ಳದ ಗ್ರಾಮಸ್ಥರು ತಮ್ಮ ಸಮಸ್ಯೆಗಳ ಸುರಿಮಳೆಗೈದರು. ಇದರಿಂದ ತಬ್ಬಿಬ್ಬಾದ ಸಂಸದ ಕಾಗೇರಿ ಜನರ ಸಮಸ್ಯೆಗಳಿಗೆ ಉತ್ತರಿಸಲಾಗದೇ ಅಲ್ಲಿಂದ ಪಲಾಯನ ಮಾಡಿದ್ದಾರೆ. ಹೋದ ಪುಟ್ಟ ಬಂದ ಪುಟ್ಟ ಮಾಡುವುದಾದರೆ ಇಲ್ಲಿ ಬರುವ ಅವಶ್ಯಕತೆ ಎನಿತ್ತು ಎಂದು ಎನ್‌ಎಚ್‌ಎಐ ಪಿಡಿ ಅವರ ಮೇಲೆಯೂ ರೊಚ್ಚಿಗೆದ್ದರು.
PublicNext
15/01/2025 04:28 pm