ಚಿತ್ರದುರ್ಗ: ಚಿತ್ರದುರ್ಗದ ಬಿಡಿ ರಸ್ತೆಯಲ್ಲಿ KSRTC ಡಿಪೋ ಮುಂಭಾಗ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದು ಯಾವುದೇ ಕೆಲಸ ನಡೆಯುತ್ತಿಲ್ಲ. ಹೈಟೆಕ್ ಬಸ್ ನಿಲ್ದಾಣಕ್ಕೆ ಕಾಯಕಲ್ಪ ಯಾವಾಗ ಅಂತಾ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹಾಗೂ ವಾಹನ ಸಂಚಾರ ಹೆಚ್ಚಾಗುತ್ತಿದೆ. ಹಾಗಾಗಿ ಬಿಡಿ ರಸ್ತೆ, ಚಳ್ಳಕೆರೆ ಗೇಟ್ ಹತ್ತಿರದ KSRTC ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಈ ಹಿಂದೆ ಶ್ರೀರಾಮುಲು ಸಾರಿಗೆ ಸಚಿವರಿದ್ದಾಗ ಚಾಲನೆ ನೀಡಿದ್ರು.
ಆದ್ರೆ ಎರಡು ವರ್ಷ ಕಳೆದ್ರೂ ಭೂಮಿ ಅಗೆದು ಬಿಟ್ಟಿದ್ದು, ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಇನ್ನು KSRTC ಡಿಸಿ ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವಂತೆ ವರ್ತನೆ ಮಾಡ್ತಾರೆ. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದ್ರೆ ಉಡಾಫೆ ಉತ್ತರ ನೀಡ್ತಾರೆ. ಸಂಬಂಧ ಪಟ್ಟ ಅಧಿಕಾರಿಗಳು ನಿದ್ರೆಗೆ ಜಾರಿದ್ದಾರಾ ಅಥವಾ ಜಾಣ ಕುರುಡುತನ ಪ್ರದರ್ಶನ ಮಾಡ್ತಿದ್ದಾರಾ.? ಕೂಡಲೇ ಕಾಮಗಾರಿ ಪ್ರಾರಂಭಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ
PublicNext
13/01/2025 06:05 pm