ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಎರಡು ಬೈಕ್ ಗಳ ನಡುವೆ ಅಪಘಾತ- ಸವಾರರಿಗೆ ಗಂಭೀರ ಗಾಯ

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಸಿರಿಗೆರೆ ಹಾಗೂ ಹೊಸ ರಂಗಾಪುರ ಗ್ರಾಮದ ರಸ್ತೆಯಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ನಡೆದು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆಲಘಟ್ಟ ಗ್ರಾಮದ ಬೈಕ್ ಸವಾರ ರಾಜಪ್ಪ ಎಂಬವರು ಸಿರಿಗೆರೆ ಕಡೆಯಿಂದ ಹೊಸ ರಂಗಾಪುರದ ಕಡೆಗೆ ಹೋಗುವ ಸಂದರ್ಭದಲ್ಲಿ ಎದುರಿಗೆ ಬಂದ ಹೊಸರಂಗಪುರದ ಶಿವಣ್ಣನ ಬೈಕ್ ಗೆ ಡಿಕ್ಕಿಯಾಗಿದ್ದಾನೆ. ಇದರಿಂದಾಗಿ ಹೊಸರಂಗಪುರದ ಶಿವಣ್ಣ ಎಂಬುವರಿಗೆ ಬಲಗಾಲಿಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಪ್ರಜ್ಞಾಹೀನರಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅವರನ್ನು ಉಪಚರಿಸಿ, ಆಮೇಲೆ ವಾಹನ ಮೂಲಕ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನಾ ಸ್ಥಳಕ್ಕೆ ಭರಮಸಾಗರ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Edited By : Ashok M
PublicNext

PublicNext

14/01/2025 08:48 am

Cinque Terre

24.78 K

Cinque Terre

0

ಸಂಬಂಧಿತ ಸುದ್ದಿ