ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಕೂಟಿಗೆ ಕಾರ್ ಡಿಕ್ಕಿ : ಓರ್ವ ಗಂಭೀರ

ಮೊಳಕಾಲ್ಮುರು : ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಶುಕ್ರವಾರ ಸಂಜೆ 4ಗಂಟೆಗೆ ಕೆಳಗಳಹಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಸ್ಕೂಟಿ ಚಾಲಕನಾದ ರೋಪ್ಪಾ ಗ್ರಾಮದ 34ವರ್ಷದ ಬೆಸ್ಕಾಂ ಲೈನ್ ಮ್ಯಾನ್ ರಾಜೇಶ್ ಕುತ್ತಿಗೆ ಮತ್ತು ದೇಹದ ನಾನಾ ಭಾಗದಲ್ಲಿ ತೀವ್ರತರವಾದ ಗಾಯಗೊಂಡಿದ್ದಾನೆ.

ಗಾಯಗೊಂಡ ಈತನನ್ನು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು,ನಂತರ ಗಂಭೀರವಾಗಿ ಗಾಯಗೊಂಡಿರುವ ಈತನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೊಳಕಾಲ್ಮುರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Nirmala Aralikatti
Kshetra Samachara

Kshetra Samachara

03/01/2025 07:40 pm

Cinque Terre

3.4 K

Cinque Terre

0

ಸಂಬಂಧಿತ ಸುದ್ದಿ