ಚಳ್ಳಕೆರೆ: ಕಲ್ಲಿನ ಬಂಡೆ ತುಂಬಿದ ಟ್ರ್ಯಾಕ್ಟರ್ ನ ಟೈರ್ ಸ್ಫೋಟಗೊಂಡಿದ್ದು ಮಗುಚಿ ಬಿದ್ದ ಕಾರಣ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು ಓರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಚಳ್ಳಕೆರೆ ತಾಲ್ಲೂಕಿನ ಮೈಲನಹಳ್ಳಿ ಸಮೀಪ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು ಟ್ಯಾಕ್ಟರ್ ನಲ್ಲಿ ಕಲ್ಲು ಬಂಡೆಗಳನ್ನು ತುಂಬಿಕೊಂಡು ರೇಣುಕಾಪುರದಿಂದ ಚಳ್ಳಕೆರೆ ಕಡೆಗೆ ಸಾಗಿಸುತ್ತಿರುವಾಗ ಟ್ರ್ಯಾಕ್ಟರ್ ಟೈಯರ್ ಸ್ಫೋಟಗೊಂಡು ಟ್ರ್ಯಾಕ್ಟರ್ ಉರುಳಿ ಬಿದ್ದ ಕಾರಣ ಟ್ರ್ಯಾಕ್ಟರ್ ನಲ್ಲಿದ್ದ ಬಂಡೆಗಳು ಮೇಲೆ ಬಿದ್ದು ರೇಣುಕಾಪುರ ಗ್ರಾಮದ ಶಂಕರ್ ನಾಗ್( 41) ಎನ್ನುವ ಹಾಗೂ ಆಂಧ್ರ ಮೂಲದ ವ್ಯಕ್ತಿ ಮೃತಪಟ್ಟಿದ್ದಾನೆ. ಮತ್ತೋರ್ವ ಆಂಧ್ರ ಮೂಲದ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ನಲ್ಲಿ ಚಾಲಕ ಸೇರಿದಂತೆ ಒಟ್ಟು 4 ಜನರಿದ್ದು ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಳುಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಚಳ್ಳಕೆರೆ ಡಿವೈಎಸ್ಪಿ ಟಿ.ಬಿ. ರಾಜಣ್ಣ ಮಾಹಿತಿ ನೀಡಿದ್ದಾರೆ.
PublicNext
03/01/2025 03:44 pm