ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾರಿಗೆ ಕಾರುಡಿಕ್ಕಿ:‌ ಕಾರಿನ ಚಾಲಕ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ: ಮಾಡನಾಯಕನಹಳ್ಳಿ ಬಳಿ ಕಾರು ಮತ್ತು ಲಾರಿ ನಡುವೆ ಅಪಘಾತ ನಡೆದು ಕಾರು ಚಾಲಕ ಗಾಯಗೊಂಡ ಘಟನೆ ನಡೆದಿದೆ.

ಚಿತ್ರದುರ್ಗ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-13 ರ ಮಾಡನಾಯಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು ಬಾಗಲಕೋಟೆ ಜಿಲ್ಲೆ ಜಮುಖಂಡಿ ತಾಲ್ಲೂಕಿನ ಲಕ್ಷ್ಮಿಕಾಂತ್ ಎಂಬ ಕಾರಿನ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. 

ಕಬ್ಬಿಣದ ಕಾಯಿಲ್ ಗಳನ್ನ ಲೋಡ್ ಮಾಡಿಕೊಂಡು ಲಾರಿಯೊಂದು ಕೊಯಂಬತ್ತೂರಿಗೆ ಹೊರಟಿದ್ದು ಲಾರಿ ಮಾಡನಾಯಕನಹಳ್ಳಿ ಗ್ರಾಮದ ಬಳಿ ಬಂದಾಗ ಹಿಂದಿನಿಂದ ವೇಗವಾಗಿ ಬಂದ‌ ಕಾರೊಂದು ಲಾರಿಗೆ ಡಿಕ್ಕಿ ಪಡಿಸಿದ್ದು ಕಾರು ಸಂಪೂರ್ಣ ಜಖಂ ಗೊಂಡಿದ್ದು ಚಾಲಕ ಲಕ್ಷ್ಮೀಕಾಂತ್ ಗಂಭೀರವಾಗಿ ಗಾಯಗೊಂಡಿದ್ದು ಲಾರಿ ಚಾಲಕ ಆತನನ್ನ ಉಪಚರಿಸಿ ಅಂಬುಲೆನ್ಸ್ ಮೂಲಕ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದು ಕಾರಿನ ಚಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನಾ ಸ್ಥಳಕ್ಕೆ ತುರುವನುರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಖರಣ ದಾಖಲಿಸಿಕೊಂಡಿದ್ದಾರೆ.

Edited By : PublicNext Desk
Kshetra Samachara

Kshetra Samachara

03/01/2025 07:45 am

Cinque Terre

1.84 K

Cinque Terre

0