ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ : ಮುಂಗಾರು ಹಂಗಾಮಿನ 23.33 ಕೋಟಿ ವಿಮಾ ಮೊತ್ತ ಬಿಡುಗಡೆ

ಚಿತ್ರದುರ್ಗ : 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನಾಧಾರಿತ ಬೆಳೆವಿಮೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ 3584 ರೈತರಿಗೆ ರೂ.2333.01 ಲಕ್ಷ ವಿಮಾ ಮೊತ್ತವನ್ನು ಕ್ಷೇಮಾ ಇನ್ಸುರೆನ್ಸ್ ಕಂಪನಿಯರು ವಿಮಾದಾರರ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನಧಾರಿತ ಬೆಳೆವಿಮೆ ಯೋಜನೆಯಡಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಮಾವು ಮತ್ತು ದಾಳಿಂಬೆ ಬೆಳೆಗೆ ಜಿಲ್ಲೆಯ 3648 ರೈತರು ರೂ.226.99 ಲಕ್ಷ ಪ್ರೀಮಿಯಂ ಪಾವತಿಸಿ ನೋಂದಾಯಿಸಿಕೊಂಡಿದ್ದು, ಈ ಪೈಕಿ 3584 ರೈತರಿಗೆ ರೂ.2333.01 ಲಕ್ಷ ವಿಮಾ ಮೊತ್ತವನ್ನು ಕ್ಷೇಮಾ ಇನ್ಸುರೆನ್ಸ್ ಕಂಪನಿಯರು ಜಿಲ್ಲೆ ಎಲ್ಲಾ ವಿಮಾದಾರರ ಖಾತೆಗೆ ಬಿಡುಗಡೆ ಮಾಡಿರುತ್ತಾರೆ.

ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಹಕರಿಸಿದ ಜಿಲ್ಲೆಯ ಎಲ್ಲ ರೈತರಿಗೆ ಅಭಿನಂದನೆ ಸಲ್ಲಿಸುತ್ತಾ, ಮುಂದಿನ ದಿನಗಳಲ್ಲಿ ಈ ಯೋಜನೆ ಅನುಷ್ಟಾನ ಮಾಡಲು ಸಹಕರಿಸಲು ಕೋರಿದ್ದಾರೆ.ಮುಂದಿನ ವರ್ಷಗಳಲ್ಲಿ ಈ ಯೋಜನೆಯಡಿ ನೋಂದಾಯಿಸಿಕೊಳ್ಳುವ ರೈತರು ಯೋಜನೆಯ ಸದುಪಯೋಗ ಪಡೆಯಲು ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕಡ್ಡಾಯವಾಗಿ ಬೆಳೆಯನ್ನು ಇಂದೀಕರಿಸಬೇಕು ಹಾಗೂ ಹಿಂದಿನ 2 ವರ್ಷಗಳಲ್ಲಿ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ಕಡ್ಡಾಯವಾಗಿ ಬೆಳೆಯನ್ನು ನೊಂದಾಯಿಸಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

05/01/2025 12:16 pm

Cinque Terre

29.03 K

Cinque Terre

0

ಸಂಬಂಧಿತ ಸುದ್ದಿ