ಹಿರಿಯೂರು: ಇವತ್ತು ಭೂಮಿಯನ್ನು ನಿರಂತರವಾಗಿ ಕಾಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿಜ್ಞಾನದ ಆಟಿಕೆಗಳನ್ನು ತಯಾರಿಸಿ, ವಿಜ್ಞಾನದ ನಿಯಮ, ತತ್ವ ಸಿದ್ಧಾಂತಗಳನ್ನು ತಿಳಿಯುವುದರ ಮೂಲಕ ಕಸವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಂಡು ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಗಟ್ಟಬಹುದು ಎಂದು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ. ಆರ್.ದಾಸೇಗೌಡ ಅವರು ಅಭಿಪ್ರಾಯ ಪಟ್ಟರು.
ಹಿರಿಯೂರು ತಾಲೂಕು ಆಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ, ಸುಂದರ್ಲಾಲ್ ಬಹುಗುಣ ಹಸಿರುಪಡೆ ಮತ್ತು ವಿಜ್ಞಾನ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಜ್ಞಾನ ಆಟಿಕೆಗಳ ತಯಾರಿಕೆ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಕುರಿತು ಮಾತನಾಡಿದರು.
Kshetra Samachara
07/01/2025 05:07 pm