ಹೊಸನಗರ: ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಯಡೂರು ಗ್ರಾಮ ಪಂಚಾಯಿತಿ ಕವರಿಯಿಂದ ಕೋಳೂರು ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆಗೆ ಡಾಂಬರೀಕರಣ ಮಾಡದಿದ್ದರೆ ಮುಂಬರುವ ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸುವುದಾಗಿ ಅಲ್ಲಿನ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕವರಿಯಿಂದ ಕೋಳೂರು ಗ್ರಾಮಕ್ಕೆ ಸುಮಾರು 2 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದ್ದು, ಇಲ್ಲಿನ ಗ್ರಾಮ ಪಂಚಾಯತಿ ಆಡಳಿತ ವರ್ಗ ಈ ರಸ್ತೆಗೆ ಬರೀ ಮಣ್ಣು ಹಾಕಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದರೆಯೇ ಹೊರತು ಇಲ್ಲಿನ ನಿವಾಸಿಗಳಿಗೆ ಓಡಾಟದ ದೃಷ್ಠಿಯಿಂದ ರಸ್ತೆ ನಿರ್ಮಾಣ ಮಾಡುತ್ತಿಲ್ಲ. ಈ ರಸ್ತೆಗೆ ಪುರಾತನ ಕಾಲದ ಇತಿಹಾಸವಿದೆ ತೀರ್ಥಹಳ್ಳಿ ವಿಧಾನಸಭೆಗೆ ಸೇರುವ ಈ ರಸ್ತೆಯಾಗಿದ್ದು ವಿಧಾನಸಭಾ ಸದಸ್ಯರು ಚುನಾವಣೆಯ ಸಂದರ್ಭದಲ್ಲಿ ಬಂದು ಓಟು ಕೇಳುವಾಗ ನಾನು ಗೆದ್ದರೆ ಖಂಡಿತ ರಸ್ತೆ ರಿಪೇರಿ ಮಾಡಿಸಿಕೊಡುತ್ತೇವೆ ಎಂದು ಹೋದವರು ಗೆದ್ದ ಮೇಲೆ ಈ ಕಡೆ ಮುಖ ಹಾಕದಿರುವುದು ವಿಪರ್ಯಾಸ. ಮುಂದಿನ ಚುನಾವಣೆಯಲ್ಲಿ ಮತ್ತೆ ಓಟು ಕೇಳಲು ರಾಜಕೀಯ ನಾಯಕರು ಬರುತ್ತಾರೆ. ಈಗಾಗಲೇ 10 ವಿಧಾನಸಭಾ ಚುನಾವಣೆ ನಡೆದರೂ ಬರೀ ಆಶ್ವಾಸನೆಯಾಗಿಯೇ ಉಳಿದಿದ್ದು ರಸ್ತೆ ರಿಪೇರಿ ಮಾಡಿಕೊಡದೇ ಹೋದಲ್ಲಿ ಮುಂದೆ ನಡೆಯುವ ಎಲ್ಲ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಅಲ್ಲಿನ ಗ್ರಾಮಸ್ಥರು ಈ ಮೂಲಕ ತಿಳಿಸಿದರು.
PublicNext
07/01/2025 08:48 pm