ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗದ ಜೆ.ಎಂ.ಐ.ಟಿ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ಎಡಿಸಿಗೆ ಮನವಿ

ಚಿತ್ರದುರ್ಗ: ನಗರದ ಗಾಂಧಿ ವೃತ್ತದಿಂದ ಜೆಎಂಯುಟಿ ವೃತ್ತದ ವರಗೆ ರಸ್ತೆ ಅಗಲೀಕರಣ ಮಾಡಬೇಂದು ಚಿತ್ರದುರ್ಗ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಡಳಿತ ಮತ್ತು ನಗರಸಭೆಯಿಂದ ನಗರದ ಮುಖ್ಯ ರಸ್ತೆಯ ಅಗಲೀಕರಣ ಮಾಡಲು ತೀರ್ಮಾನಿಸಿರುವುದು ಸ್ವಾಗತಾರ್ಹ, ನಗರದ ಚಳ್ಳಕೆರೆ ಗೇಟ್‌ನಿಂದ ಕನಕ ವೃತ್ತದವರೆಗಿನ ರಸ್ತೆಯನ್ನು ಅಗಲೀಕರಣ ಮಾಡುವುದಾಗಿ ತಿಳಿಸಿರುತ್ತೀರಿ. ಇದು ನಗರದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ನಿರ್ಣಯವಾಗಿದೆ. ನಮ್ಮ ಬೇಡಿಕೆ ಏನೆಂದರೆ, ಈ ರಸ್ತೆಯ ಜೊತೆಗೆ ನಗರದ ಗಾಂಧೀವೃತ್ತದಿಂದ ಜೆ.ಎಂ.ಐ.ಟಿ. ವೃತ್ತದವರೆಗಿನ ದಾವಣಗೆರೆ ರಸ್ತೆಯನ್ನು ಸಹ ಇಷ್ಟೇ ಅಳತೆಯಲ್ಲಿ ಆಗಲೀಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ರಸ್ತೆಯ ಅಗಲೀಕರಣ ತುಂಬಾ ಅವಶ್ಯಕತೆ ಇದೆ. ಈ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಎ.ಪಿ.ಎಂ.ಸಿ. ಮುಖ್ಯರಸ್ತೆ, ರೈಲ್ವೆ ನಿಲ್ದಾಣ ಮತ್ತು ಬ್ಯಾಂಕ್‌ಗಳು ಹಾಗೂ ಪ್ರಮುಖ ವ್ಯಾಪಾರದ ಮಾಲ್‌ಗಳು ಇರುತ್ತವೆ. ಇದರಿಂದ ಈ ರಸ್ತೆಯಲ್ಲಿ ಹೆಚ್ಚು ವಾಹನಗಳ ಓಡಾಟ ಮತ್ತು ಹೆಚ್ಚಿನ ಜನಸಂದಣಿ ಇರುತ್ತದೆ. ಹಾಗಾಗಿ ಈ ರಸ್ತೆಯ ಅಗಲೀಕರಣದ ನಿರ್ಣಯವನ್ನು ಒಂದು ತಿಂಗಳ ಕಾಲಾವಧಿಯೊಳಗೆ ತೆಗೆದುಕೊಳ್ಳದಿದ್ದರೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

Edited By : PublicNext Desk
Kshetra Samachara

Kshetra Samachara

08/01/2025 03:58 pm

Cinque Terre

220

Cinque Terre

0

ಸಂಬಂಧಿತ ಸುದ್ದಿ