ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬರದ ಊರಲ್ಲಿ ಕಾಫಿ & ಮೆಣಸು ಬೆಳೆದು ಗಮನ ಸೆಳೆದ ರೈತ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲೇ ಅತೀ ಹೆಚ್ಚು ಬಾರಿ ಬರಕ್ಕೆ ತುತ್ತಾದ ಜಿಲ್ಲೆ. ಅಲ್ಲಿ ಕೃಷಿ ಮಾಡೋದೇ ಒಂದು ಸಾಹಸ. ಅಂಥದ್ದರಲ್ಲಿ ಮಲೆನಾಡಲ್ಲಿ ಬೆಳೆಯುವ ಕಾಳು ಮೆಣಸು, ಕಾಫಿ, ಬೆಳೆಗಳನ್ನು ಬಯಲು ಸೀಮೆಯಲ್ಲಿ ಬೆಳೆದಿದ್ದಾರೆ. ಅಡಿಕೆ ತೋಟದ ಮಧ್ಯೆ ಖಾಲಿ ಜಾಗೆಯಲ್ಲಿ ಕಾಫಿ ಬೆಳೆ ಬೆಳೆದಿದ್ದು, ಅಡಿಕೆ‌ ಮರಗಳ ಗುಂಟ ಕಾಳು ಮೆಣಸಿನ ಬಳ್ಳಿ ಬೆಳೆದಿದ್ದಾರೆ.

ಶಿರಸಿಯಲ್ಲಿ ಸೀತಾರಾಮ ಹೆಗಡೆ ಎಂಬ ರೈತರು ಬೆಳೆದಿದ್ದನ್ನು ಕಂಡು ತಿಪ್ಪೇಸ್ವಾಮಿ ತಾವೂ ಕೂಡ ಚಳ್ಳಕೆರೆಯ ತಮ್ಮ 30 ಎಕರೆ ಜಮೀನಲ್ಲಿ ಸುಮಾರು 20 ಎಕರೆಯಲ್ಲಿ ಪ್ರಾಯೋಗಿಕವಾಗಿ ಮಾಡಿ ಯಶಸ್ವಿ ಕಂಡಿದ್ದಾರೆ. ಈಗಾಗಲೇ 8 ಎಕರೆಯಲ್ಲಿ ಬೆಳೆದ ಕಾಫಿ ಹಾಗೂ ಮೆಣಸು ಒಳ್ಳೆಯ ಲಾಭ ಕಂಡು ಕೊಂಡಿದ್ದಾರೆ.

ಇನ್ನು ಇದೇ ರೀತಿ ರೈತ ತಿಪ್ಪೇಸ್ವಾಮಿ ತಮ್ಮ ಇನ್ನುಳಿದ 10 ಎಕರೆ ಜಮೀನಲ್ಲಿ ದಾಳಿಂಬೆ ಹಾಗೂ ತೆಂಗು ಬೆಳೆ ಬೆಳೆದಿದ್ದಾರೆ. ಇನ್ನು ಕೃಷಿಯ ಜೊತೆ ಜೊತೆಗೆ ಹೈನುಗಾರಿಕೆಯನ್ನು ಕೂಡ ಮಾಡ್ತಾರೆ. ದೇಶಿ ಸೇರಿದಂತೆ ಎಚ್.ಎಫ್ ತಳಿಯ ಹಸುಗಳನ್ನು ಪಾಲನೆ ಮಾಡ್ತಾರೆ. ಕೃಷಿಯಲ್ಲಿ ನವೀನ ಪದ್ಧತಿ, ಶ್ರದ್ಧೆ ಇರಬೇಕು. ಹಣಕಾಸು ಇದ್ದರೇ ಮಾತ್ರ ಸಾಲದು, ಮಣ್ಣು ಪರೀಕ್ಷೆ, ಸಮರ್ಪಕ ಗೊಬ್ಬರ ಸೇರಿದಂತೆ ಅಗತ್ಯ ಕೌಶಲ್ಯ ಇರಬೇಕು ಅಂತಾ ರೈತ ತಿಪ್ಪೇಸ್ವಾಮಿ ಯುವ ರೈತರಿಗೆ ಸಲಹೆ ನೀಡ್ತಾರೆ.

ಒಟ್ಟಾರೆ ಬರದ ನಾಡಲ್ಲಿ ಕೃಷಿಯಲ್ಲಿ‌ ಲಾಭ ಮರೀಚಿಕೆ ಎನ್ನುವ ಮಾತು ಸಾಮಾನ್ಯ. ಸಧ್ಯ ಎಲ್ಲ ಸವಾಲುಗಳನ್ನು ಮೆಟ್ಟಿ ಮಲೆನಾಡ ಬೆಳೆಗಳನ್ನು ಬರದ ನಾಡಲ್ಲಿ ಬೆಳೆದಿದ್ದು ಮಾತ್ರ ಸಾಹಸವೇ ಸರಿ.

Edited By : Ashok M
PublicNext

PublicNext

08/01/2025 02:00 pm

Cinque Terre

23.81 K

Cinque Terre

0

ಸಂಬಂಧಿತ ಸುದ್ದಿ